4:47 AM Wednesday 22 - October 2025

ಶೃಂಗಸಭೆಯ ಔತಣಕೂಟಕ್ಕಿಲ್ಲ ಖರ್ಗೆಗೆ ಆಹ್ವಾನ: ಕೇಸರಿ ಪಕ್ಷವು ದೇಶದ ಜನಸಂಖ್ಯೆಯ ಶೇಕಡ 60ರಷ್ಟು ನಾಯಕನಿಗೆ ಪ್ರಾಮುಖ್ಯತೆ ನೀಡಲ್ಲ ಎಂದ ರಾಹುಲ್ ರಿಂದ ವಾಗ್ಯುದ್ದ

09/09/2023

ಜಿ20 ಶೃಂಗಸಭೆಯ ಔತಣಕೂಟಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡದಿರುವುದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ನರೇಂದ್ರ ಮೋದಿ ಸರ್ಕಾರದ ಈ ಕ್ರಮವನ್ನು ‘ದಲಿತ ವಿರೋಧಿ’ ಎಂದು ಕರೆದಿದ್ದಾರೆ.

ಇನ್ನು ಇತ್ತ ಸ್ವತಃ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರವನ್ನು ಗುರಿಯಾಗಿಸಿ ಕಿಡಿಕಾರಿದ್ದಾರೆ. ಜಿ20 ಶೃಂಗಸಭೆಯ ಔತಣಕೂಟಕ್ಕೆ ಖರ್ಗೆ ಅವರನ್ನು ಆಹ್ವಾನಿಸಿಲ್ಲ ಎಂಬ ವರದಿಗಳ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಿಜೆಪಿಯನ್ನು ಗುರಿಯಾಗಿಸಿದ್ದಾರೆ. ಕೇಸರಿ ಪಕ್ಷವು ಭಾರತದ ಜನಸಂಖ್ಯೆಯ ಶೇಕಡ 60ರಷ್ಟು ನಾಯಕನಿಗೆ ಪ್ರಾಮುಖ್ಯತೆಯನ್ನು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಯುರೋಪ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾರತದಲ್ಲಿ ಮಹಾತ್ಮ ಗಾಂಧಿಯವರ ದೂರದೃಷ್ಟಿ ಮತ್ತು ನಾಥೂರಾಂ ಗೋಡ್ಸೆ ಅವರ ದೂರದೃಷ್ಟಿಯ ನಡುವೆ ಹೋರಾಟವಿದೆ ಎಂದರು.

ಜಿ20 ಔತಣಕೂಟಕ್ಕೆ ಖರ್ಗೆಯವರನ್ನು ಆಹ್ವಾನಿಸದಿರುವ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ನಿಮಗೆ ಏನನ್ನಾದರೂ ಹೇಳುತ್ತದೆ.

ಭಾರತದ ಜನಸಂಖ್ಯೆಯ 60 ಪ್ರತಿಶತವನ್ನು ಪ್ರತಿನಿಧಿಸುವ ನಾಯಕನಿಗೆ ಅವರು ಪ್ರಾಮುಖ್ಯತೆಯನ್ನು ನೀಡುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ಇದು ಜನರು ಯೋಚಿಸಬೇಕಾದ ವಿಷಯ ಎಂದು ಹೇಳಿದರು.

“ಇದಕ್ಕೆ ತದ್ವಿರುದ್ಧವಾದುದ್ದೇನು..?” ಇದು ಜನರು ಯೋಚಿಸಬೇಕಾದ ವಿಷಯ. ಅವರು ಅದನ್ನು ಮಾಡುವ ಅಗತ್ಯವನ್ನು ಏನಿದೆ ಮತ್ತು ಅದರ ಹಿಂದೆ ಯಾವ ರೀತಿಯ ಆಲೋಚನೆ ಇದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version