2:55 AM Saturday 18 - October 2025

ಭಾರತ್ ಜೋಡೋ ವೇದಿಕೆಯಲ್ಲಿ ಅಣ್ಣ—ತಂಗಿಯ ಪ್ರೀತಿ ಕಂಡು ಮೂಕವಿಸ್ಮಿತರಾದ ಜನ

rahul gandhi
03/01/2023

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಇಂದು ಉತ್ತರ ಪ್ರದೇಶ ಪ್ರವೇಶಿಸಿತು. ಇದೇ ವೇಳೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ್ ಗಾಂಧಿ ಅವರ ಅಣ್ಣ—ತಂಗಿಯ ಬಾಂಧವ್ಯಕ್ಕೆ ವೇದಿಕೆ ಸಾಕ್ಷಿಯಾಯಿತು.

ವೇದಿಕೆಯಲ್ಲಿ ಕುಳಿತಿದ್ದ ರಾಹುಲ್ ಗಾಂಧಿ ಅವರು ಸಹೋದರಿ ಪ್ರಿಯಾಂಕ್ ಗಾಂಧಿ ಅವರನ್ನು ಬಿಗಿದಪ್ಪಿ ಪ್ರೀತಿಯಿಂದ ಪಪ್ಪಿ ನೀಡಿದರು. ಈ ವೇಳೆ ಅಣ್ಣ ತಂಗಿಯ ಪ್ರೀತಿಗೆ ಮೆಚ್ಚಿದ ಕಾರ್ಯಕರ್ತರು ವನ್ಸ್ ಮೋರ್ ಎಂದು ಕೂಗಿದರು. ಸಭಿಕರ ಮಾತಿಗೆ ನಿರಾಸೆಗೊಳಿಸದ ರಾಹುಲ್ ಗಾಂಧಿ ತಮ್ಮ ಸಹೋದರಿಗೆ ಮತ್ತೊಂದು ಪಪ್ಪಿ ನೀಡಿದರು.

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಶೂ ಲೆಸ್  ಕಟ್ಟುವ ಮೂಲಕ ಗಮನ ಸೆಳೆದಿದ್ದರು. ಇದೀಗ ಸಹೋದರಿಯ ಮೇಲಿನ ಪ್ರೀತಿಯ ಮೂಲಕ ಗಮನ ಸೆಳೆದಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ, ಸೊರಗಿ ಹೋಗಿದ್ದ ಕಾಂಗ್ರೆಸ್ ಗೆ ಸಣ್ಣ ಮಟ್ಟದ ಚೇತರಿಕೆ ನೀಡಲು ಯಶಸ್ವಿಯಾಗುತ್ತಿದೆ ಅನ್ನೋ ಮಾತುಗಳು ಕೂಡ ಇದೀಗ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version