ರಾಹುಲ್ ಕ್ಷಮೆ ಕೇಳದೇ ಇರುವುದು ಗಾಂಧಿ ಕುಟುಂಬದ ರಾಜಕೀಯ ದುರಹಂಕಾರ: ಸ್ಮೃತಿ ಇರಾನಿ ವಾಗ್ದಾಳಿ
ನವದೆಹಲಿ: ರಾಹುಲ್ ಗಾಂಧಿ ತನ್ನ ವಿವಾದಿತ ಹೇಳಿಕೆಗೆ ಕ್ಷಮೆ ಯಾಚಿಸದೇ ಇರುವುದು ಗಾಂಧಿ ಕುಟುಂಬದ ರಾಜಕೀಯ ದುರಹಂಕಾರಕ್ಕೆ ಮತ್ತೊಂದು ಉದಾಹರಣೆ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಣವನ್ನು ಬದಲಾಯಿಸಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ದೇಶದ ಜನತೆ ಪ್ರಧಾನಿ ಜೊತೆಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸತ್ತಿನಲ್ಲೂ ಮೋದಿಯನ್ನು ನಿಂದಿಸಿದರು, ಆರೋಪ ಮಾಡಿದರು. ಆದರೆ ಅವರ ಸ್ವಂತ ಹೇಳಿಕೆಯನ್ನು ಅವರು ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ. ಇದು ರಾಹುಲ್ ಗಾಂಧಿಯವರ ರಾಜಕೀಯ ಹತಾಶೆಯಾಗಿದೆ ಎಂದಿದ್ದಾರೆ.
ಮೋದಿ ಅವರ ವ್ಯಕ್ತಿತ್ವ ಹಾಳು ಮಾಡುವ ರಾಹುಲ್ ಯತ್ನ ಫಲಿಸದಿದ್ದಾಗ. ಮೋದಿ ವಿರುದ್ಧ ಮತ್ತಷ್ಟು ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ದೇಶದ ಜನ ಮೋದಿ ಅವರ ದೊಡ್ಡ ಶಕ್ತಿ ಎಂದು ಅವರು ಹೇಳಿದರು.
ತೀರ್ಪು ಪ್ರಕಟಗೊಂಡ ಬಳಿಕವಾದರೂ ಹಿಂದುಳಿದ ವರ್ಗವಾದ ಮೋದಿ ಸಮುದಾಯದ ಕ್ಷಮೆ ಕೇಳುವ ಸೌಜನ್ಯವನ್ನು ರಾಹುಲ್ ತೋರಿಸಲಿಲ್ಲ. ಇದು ಗಾಂಧಿ ಕುಟುಂಬ ಎಂಬ ರಾಜಕೀಯ ದುರಹಂಕಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























