11:04 PM Friday 11 - September 2026

ರೈಲಿನಲ್ಲಿ ಭಾರೀ ಸ್ಫೋಟಕ ಸಾಗಿಸುತ್ತಿದ್ದ ಮಹಿಳೆ ವಶಕ್ಕೆ;  ಈ ಸ್ಫೋಟಕ ಸಾಗಿಸುತ್ತಿದ್ದರ ಹಿಂದಿನ ಉದ್ದೇಶ ಏನು?

26/02/2021

ಕೋಝಿಕ್ಕೋಡ್:  ಮಂಗಳೂರು ಸೂಪರ್ ಫಾಸ್ಟ್ ರೈಲ್ ನಲ್ಲಿ  ಮಹಿಳೆಯೊರ್ವರು ಭಾರೀ ಪ್ರಮಾಣ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಘಟನೆ ನಡೆದಿದ್ದು,  ಈ ಸ್ಫೋಟಕ ವಸ್ತುತಗಳನ್ನು ರೈಲು ಅಧಿಕಾರಿಗಳು ಕೋಝಿಕ್ಕೋಡ್ ನಲ್ಲಿ ವಶಕ್ಕೆ ಪಡೆದಿದ್ದಾರೆ.

ರೈಲು ಕೋಝಿಕ್ಕೋಡ್ ನಿಲ್ದಾಣಕ್ಕೆ ತಲುಪಿದಾಗ ಶೋಧ ನಡೆಸಲಾಗಿದ್ದು, ಈ ವೇಳೇ ಸೀಟಿನಡಿಯಲ್ಲಿ  ಪೆಟ್ಟಿಗೆಯಲ್ಲಿ ಈ ವಸ್ತುಗಳು ಪತ್ತೆಯಾಗಿವೆ.  ಈ ವಸ್ತುಗಳು ಚೆನ್ನೈ ಮೂಲದ ಮಹಿಳೆಗೆ ಸೇರಿದವುಗಳಾಗಿವೆ ಎನ್ನುವುದು ಈ ವೇಳೆ ಅಧಿಕಾರಿಗಳಿಗೆ ತಿಳಿದು ಬಂದಿದೆ.

117 ಜಿಲೆಟಿನ್ ಸ್ಟಿಕ್, 350ಡಿಟರ್ನೇಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು,  ಈ ವೇಳೆ ಮಹಿಳೆಯೊಬ್ಬರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಈ ಸ್ಫೋಟಕಗಳಿಗೂ ಮಹಿಳೆಗೂ ಸಂಬಂಧ ಇದೆಯೇ ಎಂದು  ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ವಶಕ್ಕೆ ಪಡೆದಿರುವ ಮಹಿಳೆಯು ಚೆನ್ನೈನಿಂದ ಕಣ್ಣೂರಿನ ತಲಶ್ಯೆರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಸ್ಫೋಟಕಗಳನ್ನು ಎಲ್ಲಿಂದ ತರಲಾಗಿತ್ತು. ಎಲ್ಲಿಗೆ ಕೊಂಡೊಯ್ಯಲಾಗುತ್ತಿತ್ತು. ಯಾವ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿತ್ತು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version