3:19 AM Wednesday 28 - January 2026

ರೈತ ಮುಖಂಡರಿಂದ ನನ್ನ ಜೀವಕ್ಕೆ ಅಪಾಯವಿದೆ | ನಟ ದೀಪ್ ಸಿಧು ಹೇಳಿಕೆ

11/02/2021

ನವದೆಹಲಿ: ಕೆಂಪುಕೋಟೆಯ ಮೇಲೆ ಹತ್ತಿ ರೈತರ ಬಾವುಟ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬಿ ನಟ ಅಚ್ಚರಿಯ ಹೇಳಿಕೆ ನೀಡಿದ್ದು, ರೈತ ಮುಖಂಡರಿಂದ ತನ್ನ ಜೀವಕ್ಕೆ ಅಪಾಯವಿದ್ದು, ಹಾಗಾಗಿ ತಾನು ತಲೆಮರೆಸಿಕೊಂಡಿದ್ದೆ ಎಂದು ತಿಳಿಸಿದ್ದಾರೆ.

ದೆಹಲಿ ಹಿಂಸಾಚಾರದಲ್ಲಿ ನನ್ನ ಹೆಸರು ಕೇಳಿ ಬಂದಿತ್ತು. ಆದರೆ ಇದು ನನ್ನೊಬ್ಬನಿಂದ ಆಗಿಲ್ಲ. ಎಲ್ಲರೂ ಕೆಂಪುಕೋಟೆಗೆ ಹೋಗುತ್ತಿದ್ದುದರಿಂದ ನಾನು ಕೂಡ ಹೋಗಿದ್ದೆ. ನನಗೆ ಬೇರೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ. ಆದರೆ ರೈತ ಮುಖಂಡರು ನನ್ನನ್ನು ದೂಷಿಸುತ್ತಿದ್ದಾರೆ ಎಂದು ದೀಪ್ ತಿಳಿಸಿದ್ದಾರೆ.

ಇನ್ನೂ ರೈತ ಮುಖಂಡರಿಂದ ತನ್ನ ಜೀವಕ್ಕೆ ಅಪಾಯವಿದೆ. ಹೀಗಾಗಿ ನಾನು ಅನಿವಾರ್ಯವಾಗಿ ತಪ್ಪಿಸಿಕೊಂಡಿದ್ದೆ ಎಂದು ದೀಪ್ ಸಿದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version