ರೈತರ ಹೋರಾಟ ದಿಕ್ಕು ತಪ್ಪುತ್ತಿದೆ ಎಂದು ಅನ್ನಿಸುತ್ತಿದೆ | ಪೇಜಾವರ ಶ್ರೀ

07/02/2021

ವಿಜಯಪುರ: ದೆಹಲಿಯ ರೈತರ ಹೋರಾಟ ದಿಕ್ಕು ತಪ್ಪುತ್ತಿದೆ ಎಂದು ಅನ್ನಿಸುತ್ತಿದೆ. ಹೋರಾಟ ನಡೆಸುತ್ತಿರುವವರು ರೈತದು ಹೌದೋ? ಅಲ್ಲವೋ ಎನ್ನುವುದು ಸ್ಪಷ್ಟವಾಗುತ್ತಿಲ್ಲ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದ ಧ್ವಜವನ್ನು ಕೆಳಗಿಳಿಸುವುದು, ಕಾಲಿನಿಂದ ತುಳಿಯುವುದು,  ಸಂವಿಧಾನದ ಪ್ರತಿಯನ್ನು ಸುಡುವುದು, ಖಲಿಸ್ತಾನ ರ ಘೋಷಣೆ ಕೂಗುವುದು. ಇವೆಲ್ಲವನ್ನು ಗಮನಿಸಿದರೆ, ಹೋರಾಟದ ದಿಕ್ಕುತಪ್ಪಿದೆ ಎಂದು ಅನ್ನಿಸುತ್ತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ ಎಂದು ಅನ್ನಿಸುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಸದ್ಯ ತೆಗೆದುಕೊಂಡಿರುವ ನಿಲುವುಗಳು ಸರಿಯಾದ ದಿಕ್ಕಿನಲ್ಲಿದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

Exit mobile version