10:58 AM Thursday 11 - December 2025

ರೈತರ ಒಗ್ಗಟ್ಟನ್ನು ಮುರಿಯಲು ಜಾತಿ ಅಸ್ತ್ರ ಪ್ರಯೋಗಿಸಬಹುದು | ರೈತರಿಗೆ ರಾಕೇಶ್ ಟಿಕಾಯತ್ ಎಚ್ಚರಿಕೆ

08/02/2021

ನವದೆಹಲಿ:  ರೈತರ ಹೋರಾಟವನ್ನು ಒಡೆಯಲು ಜಾತಿ ಎಂಬ ಅಸ್ತ್ರವನ್ನು ಬಳಸಬಹುದು ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ರೈತರನ್ನು ಎಚ್ಚರಿಸಿದ್ದಾರೆ.

ಬೃಹತ್ ಕಿಸಾನ್ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ ಅವರು,  ಈ ಹೋರಾಟ ಆರಂಭಗೊಂಡಾಗ ಅವರು ಪಂಜಾನ್, ಹರ್ಯಾಣ, ಸರ್ದಾರ್‍ ಗಳು, ಸರ್ದಾರ್ ಅಲ್ಲದವರು ಎಂದು ಹೇಳಿಕೊಂಡು ರೈತರಲ್ಲಿ ಭಿನ್ನಾಭಿಪ್ರಾಯ ಉಂಟು ಮಾಡಲು ಯತ್ನಿಸಿದ್ದರು. ಅವರು ವಿವಿಧ ಖಾಪ್‍ ಗಳ ಆಧಾರದಲ್ಲೂ ನಿಮ್ಮ ಒಗ್ಗಟ್ಟಿಗೆ ಭಂಗವುಂಟು ಮಾಡಬಹುದು ಆದರೆ ನೀವು ಒಗ್ಗಟ್ಟಿನಿಂದಿರಬೇಕು ರಂದು ಟೀಕಾಯತ್ ಹೇಳಿದರು.

ಕೃಷಿ ಕಾಯಿದೆಗಳ ವಿರುದ್ಧ ಜಾಗೃತಿ ಮೂಡಿಸಲು ದೇಶಾದ್ಯಂತ ನಾವು ಸಂಚರಿಸುತ್ತೇವೆ, ಈ ಆಂದೋಲನ ಯಶಸ್ವಿಯಾಗದೇ ಇರದು, ಈ ಕಾನೂನುಗಳ ವಾಪಸಾತಿಯಾಗದೆ ನಾವು ಮನೆಗಳಿಗೆ ಹಿಂದಿರುಗುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ದೃಢ ನಿರ್ಧಾರವನ್ನು ತಿಳಿಸಿದರು.

ಇತ್ತೀಚಿನ ಸುದ್ದಿ

Exit mobile version