ಟೈಗರ್ ಸಫಾರಿಗೆ ಕರೆದೊಯ್ದು ಪ್ರವಾಸಿಗರನ್ನು ನಡು ಕಾಡಿನಲ್ಲಿ ಬಿಟ್ಟು ಹೋದ ಗೈಡ್!

Rajasthan Tiger Safari Horror– ಜೈಪುರ: ಟೈಗರ್ ಸಫಾರಿಗೆ ಕರೆದೊಯ್ದಿದ್ದ ಗೈಡ್ ಪ್ರವಾಸಿಗರನ್ನು ಕಾಡಿನ ಮಧ್ಯೆ ಕತ್ತಲೆಯಲ್ಲಿ ಬಿಟ್ಟು ಹೋಗಿರುವ ಘಟನೆ ಜೈಪುರದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.
ಕಾಡಿನ ಮಧ್ಯೆ ಪ್ರವಾಸಿಗರು ತುಂಬಿದ್ದ ಕ್ಯಾಂಟರ್ ಇದ್ದಕ್ಕಿದ್ದಂತೆ ಕೆಟ್ಟು ಹೋಗಿತ್ತು. ಕ್ಯಾಂಟರ್ ನಲ್ಲಿದ್ದ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯನ್ನೂ ನೋಡದೇ ಬೇರೊಂದು ಕ್ಯಾಂಟರ್ ತರುತ್ತೇನೆಂದು ಗೈಡ್, ಹುಲಿಗಳೇ ತುಂಬಿರುವ ದಟ್ಟ ಕಾಡಿನ ನಡುವೆ ಪ್ರವಾಸಿಗರನ್ನು ಬಿಟ್ಟು ಸ್ಥಳದಿಂದ ತೆರಳಿದ್ದಾನೆ. ಆತನ ನಡೆಯನ್ನು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ಥಳದಿಂದ ಹೊರಟುಹೋಗಿದ್ದಾನೆ.
ಸಂಜೆ 6ಗಂಟೆಯಿಂದ 7:30ರವರೆಗೆ ಪ್ರವಾಸಿಗರು ಕತ್ತಲಿನ ಪ್ರದೇಶದಲ್ಲಿ ಮೊಬೈಲ್ ನ ಬೆಳಕಿನಲ್ಲಿ ಕಾಲಕಳೆಯುವಂತಾಗಿತ್ತು. ಕೆಲವು ಪ್ರವಾಸಿಗರು ಭಯದಿಂದ ಅಳುತ್ತಿರುವ ವಿಡಿಯೋ ವೈರಲ್ ಆಗಿದೆ. ಸಹಾಯಕ್ಕಾಗಿ ಪದೇ ಪದೇ ಮನವಿ ಮಾಡಿದರೂ ಅರಣ್ಯ ಇಲಾಖೆ ಸಕಾಲಕ್ಕೆ ಸಹಾಯ ನೀಡಲಿಲ್ಲ ಎಂದು ಪ್ರವಾಸಿಗರು ಹೇಳುತ್ತಾರೆ. ಕೊನೆಗೆ, ಒಬ್ಬ ಪ್ರವಾಸಿಗ ಮತ್ತೊಂದು ಜೀಪಿನಲ್ಲಿ ರಾಜ್ ಬಾಗ್ ನಾಕಾ ಚೌಕಿಗೆ ತಲುಪಿದರು ಮತ್ತು ಅಲ್ಲಿಂದ ವಾಹನ ತೆಗೆದುಕೊಂಡು ಉಳಿದ ಪ್ರವಾಸಿಗರನ್ನು ಕರೆತರಲಾಯಿತು.
ದೂರಿನ ನಂತರ, ಅರಣ್ಯ ಇಲಾಖೆಯು ಸುಮಾರು ಎರಡೂವರೆ ಗಂಟೆಗಳ ನಂತರ ಟೈಟ್ ಇಲ್ಲದ ಕ್ಯಾಂಟರ್ ಅನ್ನು ಕಳುಹಿಸಿತು. ಘಟನೆಗೆ ಸಂಬಂಧಿಸಿದಂತೆ ಕ್ಯಾಂಟರ್ ಗೈಡ್ ಮುಖೇಶ್ ಕುಮಾರ್ ಬೈರ್ವಾ , ಕ್ಯಾಂಟರ್ ಚಾಲಕರಾದ ಕನ್ಹಯ್ಯಾ, ಶಹಜಾದ್ ಚೌಧರಿ ಮತ್ತು ಲಿಯಾಕತ್ ಅಲಿ ಅವರನ್ನು ಮುಂದಿನ ಆದೇಶದವರೆಗೆ ಉದ್ಯಾನವನಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD