3 ವರ್ಷದ ಹೆಣ್ಣು ಮಗುವನ್ನು ಕೊಂದು ರೈಲಿನಿಂದ ಎಸೆದ ಪಾಪಿ ತಾಯಿ!
ಮೂರು ವರ್ಷದ ಹೆಣ್ಣು ಮಗುವನ್ನು ಕೊಂದು ತಾಯಿಯೊಬ್ಬಳು ಮೃತದೇಹವನ್ನು ರೈಲಿನಿಂದ ಎಸೆದ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ.
ತಾಯಿ ಸುನೀತಾ ಮತ್ತು ಆಕೆಯ ಪ್ರಿಯಕರ ಸನ್ನಿ ಅಲಿಯಾಸ್ ಮಾಲ್ತಾ ಸೇರಿ ಈ ದುಷ್ಕೃತ್ಯ ಎಸಗಿದ್ದು, ಸನ್ನಿ ಸಹಾಯದಿಂದ ಮನೆಯಲ್ಲೇ ಮಗುವನ್ನು ಮನೆಯಲ್ಲೇ ಕೊಂದಿದ್ದ ಸುನೀತಾ ಬಳಿಕ ಮೃತದೇಹವನ್ನು ಬೆಡ್ ಶೀಟ್ನಲ್ಲಿ ಸುತ್ತಿಕೊಂಡು ಮುಂಜಾನೆ ವೇಳೆಗೆ ಶ್ರೀಗಂಗಾನಗರ ರೈಲ್ವೆ ಸ್ಟೇಶನ್ ಗೆ ತಂದಿದ್ದಾಳೆ.
ರೈಲು ಸ್ವಲ್ಪ ದೂರ ಚಲಿಸಿ ಕಾಲುವೆಯ ಸೇತುವೆ ಬಳಿ ಬಂದಾಗ ಸುನೀತಾ ಮಗುವನ್ನು ಎಸೆದಿದ್ದಾಳೆ. ಆದರೆ, ಮೃತದೇಹ ಕಾಲುವೆಗೆ ಬೀಳದೇ ರೈಲು ಹಳಿಯ ಮೇಲೆ ಬಿದ್ದಿದ್ದು, ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ತನಿಖೆ ಆರಂಭಿಸಿದ್ದು, ಈ ವೇಳೆ ಸುನೀತಾ ಹಾಗೂ ಸನ್ನಿ ಸಿಕ್ಕಿ ಬಿದ್ದಾರೆ.
ಸುನೀತಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ ಕೊನೆಯ ಮಗುವನ್ನು ಹತ್ಯೆ ಮಾಡಿದ್ದಾರೆ. ಹತ್ಯೆಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























