‘ರಂಗ್ ದ ಬರ್ಸ’ ಕಾರ್ಯಕ್ರಮಕ್ಕೆ ದಾಳಿ ವಿಚಾರ: ಕಾರ್ಯಕ್ರಮವನ್ನು ಹಿಂದೂಗಳೇ ಆಯೋಜನೆ ಮಾಡಿದ್ದು: ಸಂಘಟಕರು
‘ರಂಗ್ ದ ಬರ್ಸ’ ಕಾರ್ಯಕ್ರಮವನ್ನು ಹಿಂದೂಗಳೇ ಆಯೋಜನೆ ಮಾಡಿದ್ದು. ಪೊಲೀಸ್ ಇಲಾಖೆಯ ಅಧಿಕೃತ ಅನುಮತಿ ಇದ್ದರೂ ಕಿಡಿಗೇಡಿಗಳು ಸ್ಥಳಕ್ಕೆ ಬಂದು ಧ್ವಂಸ ಮಾಡಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕಾರ್ಯಕ್ರಮ ಸಂಘಟಕ ಜೀವನ್ ಒತ್ತಾಯಿಸಿದ್ದಾರೆ.
ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಳೆದ ಭಾನುವಾರ ಮರೋಳಿ ಸೂರ್ಯವುಡ್ಸ್ ಗ್ರೌಂಡ್ಸ್‌ನಲ್ಲಿ ಆಯೋಜಿಸಲಾಗಿದ್ದ ‘ರಂಗ್‌ದ ಬರ್ಸ’ ಕಾರ್ಯಕ್ರಮದ ಮೇಲೆ ದಾಳಿ ಆದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ರು.
ಗೆಳೆಯರ ಸಹಭಾಗಿತ್ವದಲ್ಲಿ ಕಳೆದ 6 ವರ್ಷಗಳಿಂದ ನಾವು ಈ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದೇವೆ. ಈ ಬಾರಿಯೂ ಪೊಲೀಸ್ ಇಲಾಖೆ ಅನುಮತಿ ಪಡೆದುಕೊಂಡು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೆವು. ಇದನ್ನು ಹಿಂದೂಗಳೇ ಆಯೋಜನೆ ಮಾಡಿರುವುದು. ಇದು ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ ಮಕ್ಕಳಿಂದ ಹಿಡಿದು ಕುಟುಂಬವರ್ಗದವರಿಗೆ ಇದ್ದ ಕಾರ್ಯಕ್ರಮವಾಗಿತ್ತು ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಅವರಿಗೆ ನಿಲ್ಲಿಸಬೇಕೆಂದರೆ ಮೊದಲೇ ನಮ್ಮನ್ನು ಸಂಪರ್ಕಿಸಬಹುದಿತ್ತು. ಅಥವಾ ಕಾನೂನಾತ್ಮಕವಾಗಿ ನಿಲ್ಲಿಸಬಹುದಿತ್ತು. ಅದನ್ನು ಬಿಟ್ಟು ಏಕಾಏಕಿ ನುಗ್ಗಿ ಹಲ್ಲೆ ಮಾಡಿ ಕಾರ್ಯಕ್ರಮವನ್ನು ನಿಲ್ಲಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ಯಾರನ್ನೂ ಬಲವಂತವಾಗಿ ಕಾರ್ಯಕ್ರಮಕ್ಕೆ ಕರೆಯದೇ ಮೊದಲೇ ಆಹ್ವಾನ ನೀಡಲಾಗಿತ್ತು. ಒಂದು ತಿಂಗಳಿನಿಂದ ಪ್ರಚಾರವನ್ನೂ ಮಾಡಿದ್ದೆವು. ಇದರಿಂದ ನಮಗೆ 5 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಚರಣ್, ಅರ್ಜನ್, ಸುಜೀರ್ ಮೊದಲಾದವರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























