7:29 PM Friday 11 - September 2026

ರಾಶಿ ಹೆಣಗಳನ್ನು ತೋರಿಸಿ ಮಾಧ್ಯಮಗಳು ಭೀತಿ ಸೃಷ್ಟಿಸುತ್ತಿವೆ | ಬಿಜೆಪಿ  ರಾ. ಪ್ರಧಾನ ಕಾರ್ಯದರ್ಶಿ ಅಸಮಾಧಾನ

kaylash vargia
20/04/2021

ಇಂದೋರ್: ರಾಶಿ ರಾಶಿ ಶವಗಳನ್ನು ತೋರಿಸುವ ಮಾಧ್ಯಮ ವರದಿಗಳಿಂದ ಭೀತಿ ಹರಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಮಂಗಳವಾರ ಆರೋಪಿಸಿದ್ದು, ಕೊವಿಡ್ ಸಾವುಗಳ ಬಗೆಗಿನ ಮಾಧ್ಯಮ ವರದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕು ಪೀಡಿತ ಜನರಿಗೆ ಸೇವೆ ಸಲ್ಲಿಸುವವರ ಸಕಾರಾತ್ಮಕ ಕಥೆಗಳನ್ನು ಸಹ ತೋರಿಸಬೇಕು ಎಂದು ಅವರು ಹೇಳಿದ್ದಾರೆ. ಅರೆವೈದ್ಯಕೀಯ ಸಿಬ್ಬಂದಿ, ಎನ್ ಜಿಒಗಳು, ಇತರ ಕ್ಷೇತ್ರಗಳ ಜನರು ಕೋವಿಡ್-19 ಪೀಡಿತ ಜನರಿಗಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಮನವಿ ಮಾಡುತ್ತೇನೆ, ನೀವುಗಳ ಪ್ರತಿದಿನ ತೋರಿಸುವ ರಾಶಿ ರಾಶಿ ಶವಗಳು, ರೋಗಿಗಳ ಸಂಕಟಗಳು, ಸಾಮಾನ್ಯ ಜನರಲ್ಲಿ ಭೀತಿಯನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದ್ದಾರೆ.

ಪ್ರತಿ 100 ವರ್ಷಗಳಿಗೆ ಒಮ್ಮೆ ಸಾಂಕ್ರಾಮಿಕ ರೋಗಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ನಿರಂತರವಾಗಿ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಧ್ಯಮಗಳು ತೋರಿಸಬೇಕು, ಅನೇಕ ವೈದ್ಯಕೀಯೇತರ ಸಿಬ್ಬಂದಿ ಕೂಡಾ ಕೊರೋನಾ ಪೀಡಿತ ಜನರಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನು ಸಹ ಸಾರ್ವಜನಿಕರಿಗೆ ತೋರಿಸಬೇಕು ಏಕೆಂದರೆ ಇದು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಬಹಳ ಅವಶ್ಯಕವಾಗಿದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler
Exit mobile version