ರಾಮಮಂದಿರದಲ್ಲಿ ನೀರು: ಕಾಮಗಾರಿ ಪೂರ್ಣ ಆಗದಿರೋದೇ ಕಾರಣ ಎಂದ ಶ್ರೀರಾಮ ಟ್ರಸ್ಟ್

27/06/2024

ರಾಮಮಂದಿರದೊಳಗೆ ಮಳೆ ನೀರು ತುಂಬಿರುವುದಕ್ಕೆ ಕಾಮಗಾರಿ ಪೂರ್ಣವಾಗದಿರುವುದೇ ಕಾರಣ ಎಂದು ಮಂದಿರ ನಿರ್ಮಾಣದ ಮೇಲ್ನೋಟ ವಹಿಸುತ್ತಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಸಮರ್ಥಿಸಿಕೊಂಡಿದೆ. ರಾಮನ ವಿಗ್ರಹವನ್ನು ಸ್ಥಾಪಿಸಲಾದ ಸ್ಥಳಕ್ಕೆ ಒಂದು ಹನಿ ನೀರು ಕೂಡ ಬಂದಿಲ್ಲ ಎಂದು ಕೂಡ ಟ್ರಸ್ಟ್ ಹೇಳಿದೆ. ಆದರೆ ರಾಮ ಮಂದಿರದ ಮೇಲ್ಚಾವಣಿಯಿಂದ ನೀರು ಸೋರುತ್ತಿರುವುದಾಗಿ ಮುಖ್ಯ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್ ಈ ಮೊದಲು ಹೇಳಿಕೆ ನೀಡಿದ್ದರು.

ಈ ಹೇಳಿಕೆಯ ಬಳಿಕ ಟ್ರಸ್ಟ್ ನ ಚೇರ್ಮನ್ ಆಗಿರುವ ನೃಪೇಂದ್ರ ಮಿಶ್ರ ಅವರು ಮಂದಿರದಲ್ಲಿ ಪರಿಶೀಲನೆ ನಡೆಸಿದ್ದರು. ಮಂದಿರ ಕಾಮಗಾರಿಯಲ್ಲಿ ಯಾವುದೇ ಲೋಪವಾಗಿಲ್ಲ, ಎಲೆಕ್ಟ್ರಿಕ್ ವರುಗಳಿಗಾಗಿ ಸ್ಥಾಪಿಸಲಾದ ಪೈಪ್ನ ಮೂಲಕ ಮಳೆ ನೀರು ಮಂದಿರದೊಳಕ್ಕೆ ಸೋರಿಕೆಯಾಗಿದೆ ಎಂದವರು ಹೇಳಿದ್ದಾರೆ. ಎರಡನೇ ಅಂತಸ್ತಿನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ, ಅದರ ಮೇಲ್ಚಾವಣಿ ನಿರ್ಮಾಣವಾದಾಗ ಮಳೆ ನೀರಿನ ಸೋರಿಕೆ ನಿಲ್ಲಲಿದೆ ಎಂದವರು ಹೇಳಿದ್ದಾರೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರದ ಉದ್ಘಾಟನೆ ನಡೆಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version