ಸೆರೆಯಲ್ಲಿದ್ದ ಇಬ್ಬರು ಅಮೆರಿಕ ಪ್ರಜೆಗಳ ಬಿಡುಗಡೆ ಹಮಾಸ್ ಬಂಡುಕೋರರು

21/10/2023
ಹಮಾಸ್ ಬಂಡುಕೋರರು ಅಪಹರಿಸಿರುವ 200 ಒತ್ತೆಯಾಳುಗಳು ಪೈಕಿ 20 ಮಕ್ಕಳು ಸೇರಿ ಬಹುತೇಕರು ಜೀವಂತವಾಗಿದ್ದಾರೆಂದು ಇಸ್ರೇಲ್ ಹೇಳಿಕೆ ನೀಡಿದ ಬೆನ್ನಲ್ಲೇ ಗಾಜಾದಲ್ಲಿ ಬಂಧಿಸಲಾಗಿದ್ದ ಇಬ್ಬರು ಅಮೆರಿಕಾದ ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಿದೆ.
ಅಮೆರಿಕ ಮೂಲದ ಜುಡಿತ್ ತೈ ರಾನನ್ ಮತ್ತು ಅವರ ಮಗಳು ನಟಾಲಿ ಶೋಷನಾ ರಾನನ್ ತಡರಾತ್ರಿ ಇಸ್ರೇಲ್ ಗೆ ಮರಳಿದ್ದಾರೆ.
ಶುಕ್ರವಾರ ತಡರಾತ್ರಿ ಟೆಲಿಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಹೇಳಿಕೆ ನೀಡಿರುವ ಹಮಾಸ್ ಸಶಸ್ತ್ರ ವಿಭಾಗದ ವಕ್ತಾರ ಅಬು ಉಬೈದಾ, ಮಾನವೀಯ ಆಧಾರದ ಮೇಲೆ ಅಮೆರಿಕಾದ ಇಬ್ಬರು ಪ್ರಜೆಗಳನ್ನು ಬಿಡುಗಡೆ ಮಾಡಿರೋದಾಗಿ ಹೇಳಿದ್ದಾರೆ.
ಜ್ಯುಡಿತ್ ತಾಯ್ ರಾನನ್ ಮತ್ತು ಆಕೆಯ ಹದಿಹರೆಯದ ಮಗಳು ನತಾಲಿ ಶೋಷನಾ ರಾನನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಬು ಉಬೈದಾ ತಿಳಿಸಿದ್ದಾರೆ.