ರೇಣುಕಾಸ್ವಾಮಿ ಕೇಸ್ ಟ್ವಿಸ್ಟ್: ತನಿಖಾಧಿಕಾರಿಯ ದಿಢೀರ್ ಬದಲಾವಣೆ

ಬೆಂಗಳೂರು: ಅಶ್ಲೀಲ ಮೆಸೇಜ್, ಫೋಟೋ ಕಳಿಸಿದ್ದ ರೇಣುಕಾಸ್ವಾಮಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ.
ಈ ಕೇಸ್ ನಲ್ಲಿ ಆರಂಭದಿಂದಲೇ ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ಗಿರೀಶ್ ನಾಯ್ಕ ತನಿಖಾಧಿಕಾರಿಯಾಗಿದ್ದರು. ಆದರೆ ಇಂದಿನಿಂದ ಈ ಪ್ರಕರಣವನ್ನು ಎಸಿಪಿ ಚಂದನ್ ತನಿಖೆ ನಡೆಸಲಿದ್ದು, ತನಿಖಾಧಿಕಾರಿಯಾಗಿ ಚಂದನ್ ನೇಮಕವಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಇನ್ನು ಮುಂದೆ ಎಸಿಪಿ ಚಂದನ್ ಅವರ ಸೂಚನೆಯಂತೆ ತನಿಖೆ ಮುಂದುವರಿಲಿದೆ.
ಚುನಾವಣೆ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಗಿರೀಶ್ ನಾಯ್ಕ್ ರನ್ನು ಕಾಮಾಕ್ಷಿಪಾಳ್ಯ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಚುನಾವಣೆ ಮುಗಿದ ಹಿನ್ನೆಲೆ 2 ದಿನಗಳ ಹಿಂದೆ ಅವರನ್ನು ಠಾಣೆಗೆ ಮರಳುವಂತೆ ಆದೇಶ ನೀಡಲಾಗಿತ್ತು. ಹೀಗಾಗಿ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97