ಮುಳುಗುತ್ತಿದ್ದ ದೋಣಿಯಿಂದ ಐವರು ಮೀನುಗಾರರ ರಕ್ಷಣೆ

ಮಲ್ಪೆ ಸಮುದ್ರದಲ್ಲಿ ಮುಳುಗುತ್ತಿದ್ದ ದೋಣಿಯಿಂದ ಐವರು ಮೀನುಗಾರರನ್ನು ಹಾಗೂ ಲಕ್ಷಾಂತರ ಮೌಲ್ಯದ ಸ್ವತ್ತುಗಳನ್ನು ರಕ್ಷಿಸಿರುವ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ.
ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮಧ್ಯಾಹ್ನ ದ ಹೊತ್ತಿಗೆ ಸಮುದ್ರದ ಅಲೆಗಳ ಆರ್ಭಟಕ್ಕೆ ಒಡೆದು ನೀರು ತುಂಬಿ ದೋಣಿಯು ಮುಳುಗುವ ಸ್ಥಿತಿಗೆ ತಲುಪಿತ್ತು.
ದೋಣಿಯು ಮುಳುಗುತ್ತಿರುವ ವಿಷಯ ತಿಳಿದು ತಕ್ಷಣ ಕಾರ್ಯಪ್ರವ್ರತ್ತರಾದ ಆಪತ್ಭಾಂಧವ ಈಶ್ವರ್ ಮಲ್ಪೆ ಅವರ ತಂಡ ದೋಣಿಯ ಮೂಲಕ ತೆರಳಿ ಐದು ಜನ ಮೀನುಗಾರರನ್ನು ರಕ್ಷಿಸಿದ್ದರು.
ಮತ್ತೆ ಮತ್ತೊಂದು ದೋಣಿಯ ಮೂಲಕ ಸಮುದ್ರದ ಅಲೆಗಳನ್ನು ಲೆಕ್ಕಿಸದೆ ಮುಳುಗುತ್ತಿರುವ ದೋಣಿಯ ಬಳಿ ತೆರಳಿ ಸುಮಾರು ಮೂರು ಲಕ್ಷ ರೂಪಾಯಿ ಬೆಲೆಬಾಳುವ ಎರಡು ಎಂಜಿನ್ ಹಾಗೂ ಇಂಧನಗಳನ್ನು ಸುರಕ್ಷಿತವಾಗಿ ತರುವಲ್ಲಿ ಯಶಸ್ವಿಯಾದರು. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಬಿಲಾಲ್ ಮಲ್ಪೆ, ರವಿ , ಅನಿಲ್ ಹಾಗೂ ನಾಲ್ವರು ಕೈಜೋಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw