7:06 PM Thursday 16 - October 2025

ಉದ್ಯಮಿಯನ್ನು ಟಾರ್ಗೆಟ್ ಮಾಡಿ ಮೇಲೆ ಗುಂಡಿನ ದಾಳಿ: ನಿವೃತ್ತ ಯೋಧ ಸಾವು

06/02/2025

ಬಿಹಾರದ ಗೋಪಾಲ್ ಗಂಜ್‌ನಲ್ಲಿ ಉದ್ಯಮಿಯೊಬ್ಬರ ಮೇಲೆ ದಾಳಿಕೋರರ ಗುಂಪು ದಾಳಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಸಿಲುಕಿ ನಿವೃತ್ತ ಸೈನಿಕರೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ದಾಳಿ ನಡೆದಾಗ ನಿವೃತ್ತ ಸೈನಿಕ ಸತ್ಯೇಂದ್ರ ಸಿಂಗ್ ಟೈಲ್ಸ್ ಅಂಗಡಿಯಲ್ಲಿದ್ದರು. ಅಂಗಡಿ ಮಾಲೀಕ ನಯನ್ ಪ್ರಸಾದ್ ಅವರೊಂದಿಗೆ ಭೂ ವಿವಾದವನ್ನು ಹೊಂದಿದ್ದ ಹಲ್ಲೆಕೋರರ ಟಾರ್ಗೆಟ್ ಆಗಿದ್ದರು. ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಅವಧೇಶ್ ದೀಕ್ಷಿತ್ ಮಾತನಾಡಿ, ಆರೋಪಿ ರಾಜ್ಕಿಶೋರ್ ಪ್ರಸಾದ್ ನನ್ನು ಬಂಧಿಸಲಾಗಿದ್ದು, ತನಿಖೆಯಲ್ಲಿ ಆತ ಮತ್ತು ಟೈಲ್ಸ್ ಉದ್ಯಮಿಯ ನಡುವಿನ ಭೂ ವಿವಾದ ಬೆಳಕಿಗೆ ಬಂದಿದೆ ಎಂದು ಹೇಳಿದರು. ಭೂ ವಿವಾದಕ್ಕೆ ಸಂಬಂಧಿಸಿದಂತೆ ಈ ಪ್ರದೇಶದಲ್ಲಿ ಮತ್ತೊಂದು ಕೊಲೆ ನಡೆದಿದ್ದು, ಉದ್ಯಮಿ ಅಕ್ರಮವಾಗಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version