‘ನೋ ರೋಡ್, ನೋ ವೋಟ್’ ಅಂತಿದ್ದಾರೆ ‘ಸ್ಮಾರ್ಟ್ ಸಿಟಿ’ ಮಂಗಳೂರಿನ ಜನ!

road problem in mangalore
21/12/2022

ಸ್ಮಾರ್ಟ್ ಸಿಟಿ ಹೆಗ್ಗಳಿಕೆಯ ಈ ನಗರದಲ್ಲಿ ಇದೇ ಅಭಿವೃದ್ಧಿ ಕಾಣದ ಊರು. ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆ ಏನೂ ಆಗಿಲ್ಲ. ಹೀಗಾಗಿ ಜನ್ರು ‘ನೋ ರೋಡ್, ನೋ ವೋಟ್’ ಅಂತಾ ಹೇಳ್ತಿದ್ದಾರೆ.

ಹೌದು..! ಮಂಗಳೂರು ಮಹಾನಗರ ಪಾಲಿಕೆ ಎಂದರೆ ಸ್ಮಾರ್ಟ್ ಸಿಟಿ ಎಂಬ ಬಿರುದು ಪಡೆದ ನಗರ. ಆದ್ರೆ ಈ ಸ್ಮಾರ್ಟ್ ಸಿಟಿಯಲ್ಲಿ ಅಭಿವೃದ್ಧಿ ಕಾಣದ ವಾರ್ಡ್ ಇದ್ರೆ ಅದು ಕುಡುಪುವಿನ ಕೆಲರಾಯ್ ಲೇಔಟ್ ಪ್ರದೇಶವಾಗಿದೆ. ಇಲ್ಲಿನ ಜನ್ರು ರಸ್ತೆ ಸೇರಿದಂತೆ ವಿವಿಧ ಬೇಡಿಕೆಯನ್ನು ಈಡೇರಿಸಿ ಎಂದು ಕಳೆದ ಹಲವು ವರ್ಷಗಳಿಂದ ಅಧಿಕಾರಿ, ಜನಪ್ರತಿನಿಧಿಗಳ ಕಚೇರಿ ಅಲೆದದ್ದೇ ಬಂತೇ ವಿನಃ ಈ ಭಾಗಕ್ಕೆ ಈವರೆಗೆ ಒಂದು ಅಭಿವೃದ್ಧಿ ಯೋಜನೆ ಬಂದಿಲ್ಲ ಅಂತಾರೆ ಸ್ಥಳೀಯರು.

ಇನ್ನೂ ಈ‌ ಭಾಗದ ಜನಪ್ರತಿನಿಧಿಗಳಂತೂ ಕಣ್ಣಿದ್ದು ಕುರುಡಾಗಿದ್ದು, ಸಾಲದೆಂಬಂತೆ ಇಲ್ಲಿನ ವ್ಯಕ್ತಿಯೊಬ್ರು ಮಂಗಳೂರು ಮನಪ ಮೇಯರ್ ಆಗಿ ಸೇವೆ ಸಲ್ಲಿಸಿ ಇದೀಗ ಮಾಜಿಯೂ ಆಗಿದ್ದಾರೆ. ಜನಪ್ರತಿನಿಧಿಗಳು ಅಭಿವೃದ್ಧಿಯತ್ತ ಗಮನ ಹರಿಸಿಲ್ಲ ಅಂತಾರೆ ಇಲ್ಲಿನ‌ ನಿವಾಸಿಗಳು. ಹೀಗಾಗಿ ಈ ಸಲ ‘ನೋ ರೋಡ್, ನೋ ವೋಟ್’ ಎಂಬ ಅಭಿಯಾನದ ಮೂಲಕ ಬಿಸಿ ಮುಟ್ಟಿಸಲು ರೆಡಿಯಾಗಿದ್ದಾರೆ.

ಒಟ್ಟಿನಲ್ಲಿ ಮಂಗಳೂರು ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಅದೆಷ್ಟೋ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದರೂ ಈ ಭಾಗದ ಜನರ ಮೂಲಭೂತ ಸೌಕರ್ಯಗಳ ವ್ಯವಸ್ಥೆಯತ್ತ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version