4:38 AM Friday 11 - September 2026

‘ಡಿ’ಬಾಸ್ ದರ್ಶನ್ ಅವರ ರಾಬರ್ಟ್ ಸಿನಿಮಾದ ನಿರ್ಮಾಪಕನ ಹತ್ಯೆಗೆ ಸಂಚು | 7 ಆರೋಪಿಗಳ ಬಂಧನ

21/12/2020

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ನಿರ್ಮಾಪಕ ಹಾಗೂ ಅವರ ಸಹೋದರ ಹಾಗೂ ಇಬ್ಬರು ರೌಡಿಶೀಟರ್ ಗಳ ಹತ್ಯೆಗೆ ಸಂಚು ರೂಪಿಸಿದ್ದ ಬಾಂಬೆಯ ರವಿ ತಂಡದ ಏಳು ಮಂದಿನ್ನು ಬಂಧಿಸಲಾಗಿದೆ.

ನಗರದ ದರ್ಶನ್‌, ಗಿರೀಶ್‌, ಮೋಹನ್‌, ರಾಜನ್‌ ಸೇರಿ ಏಳು ಮಂದಿ ಬಂಧಿತರು ಎಂದು ಗುರುತಿಸಲಾಗಿದೆ.  ಭಾನುವಾರ ಬೆಳಗ್ಗೆ ದಕ್ಷಿಣ ವಿಭಾಗದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.  ಬಂಧನದ ವೇಳೇ ಪ್ರಮುಖ ಆರೋಪಿಗಳಾದ ಬಾಂಬೆ ರವಿ ಮತ್ತು ನೀಲಸಂದ್ರದ ಮಂಜುನಾಥ್ ಎಂಬವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಜಯನಗರದ ನ್ಯಾಷನಲ್‌ ಕಾಲೇಜು ಸಮೀಪದಲ್ಲಿ ಕಾರೊಂದರಲ್ಲಿ ಕುಳಿತು ರಾಬರ್ಟ್‌ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌, ಅವರ ಸಹೋದರ ದೀಪಕ್‌, ರೌಡಿಶೀಟರ್‌ಗಳಾದ ಸೈಕಲ್‌ ರವಿ, ಬೇಕರಿ ರಘು ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.

ಭಾನುವಾರ ಮುಂಜಾನೆ ಐದು ಗಂಟೆ ಸುಮಾರಿಗೆ ಜಯನಗರ ಇನ್‌ಸ್ಪೆಕ್ಟರ್‌ ಗಸ್ತಿನಲ್ಲಿದ್ದರು. ಆಗ ನ್ಯಾಷನಲ್‌ ಕಾಲೇಜು ಬಳಿ ಕಾರಿನಲ್ಲಿ ಕುಳಿತು ಕೆಲ ವ್ಯಕ್ತಿಗಳು ಕೊಲೆ ಸಂಬಂಧ ಜೋರಾಗಿ ಮಾತನಾಡುತ್ತಿದ್ದಾರೆ ಎಂದು ಬಾತ್ಮೀದಾರರ ಮೂಲಕ ಮಾಹಿತಿವೊಂದು ಸಿಕ್ಕಿದೆ. ಕೂಡಲೇ ಇನ್‌ಸ್ಪೆಕ್ಟರ್‌ ಸ್ಥಳಕ್ಕೆ ಹೋಗಿ, ಪರಿಶೀಲಿಸಲು ಮುಂದಾಗಿದ್ದಾರೆ. ಆಗ ಆರೋಪಿಗಳು ಕಾರು ಚಾಲನೆ ಮಾಡಿ ಪೊಲೀಸ್‌ ಸಿಬ್ಬಂದಿ ಮೇಲೆ ಹತ್ತಿಸಲು ಯತ್ನಿಸಿದ್ದಾರೆ. ಅನಂತರ ಪೊಲೀಸ್‌ ಜೀಪ್‌ನಿಂದ ಕಾರನ್ನು ಅಡ್ಡಗಟ್ಟಿ, ಕಾರಿನಿಂದ ಇಳಿಯುವಂತೆ ಸೂಚಿಸಲಾಗಿದೆ. ಆಗ ಕಾರಿನಲ್ಲಿದ್ದ ಆರೋಪಿಯೊಬ್ಬ ಕಿಟಕಿಯಿಂದಲೇ ಮಾರಕಾಸ್ತ್ರದಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಕೂಡಲೇ ಇನ್ನಷ್ಟು ಮಂದಿ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ಯಲಾಗಿತ್ತು. ಬಳಿಕ ಅವರ ಕಾರು ಪರಿಶೀಲಿಸಿದಾಗ ಹತ್ತಾರು ಮಾರಕಾಸ್ತ್ರಗಳು ಇರುವುದು ಗೊತ್ತಾಗಿದೆ. ವಿಚಾರಣೆ ವೇಳೆ ಒಬ್ಬ ವ್ಯಕ್ತಿಯ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ ಪಾಂಡೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version