ಆರ್ ಎಸ್ ಎಸ್ ತಂಪೆರೆಯುವ ಆಲದ ಮರ, ಅಲುಗಾಡಿಸಲು ಅಸಾಧ್ಯ: ಮಾಜಿ ಸಚಿವ ಬಿ.ಶ್ರೀರಾಮುಲು

ವಿಜಯನಗರ ಜಿಲ್ಲೆ, ಕೂಡ್ಲಿಗಿ: ರಾಷ್ಟ್ರೀಯ ಸ್ವಯಂ ಸೇವಾ ಸಂಘ ರಾಷ್ಟ್ರ ಕಟ್ಟುವ ಸಂಘವಾಗಿದ್ದು , ಸಮಾಜಕ್ಕೆ ತಂಪೆರೆವ ಹೆಮ್ಮರವಾಗಿದೆ ಅದನ್ನು ಯಾರಿಂದಲೂ ಅಲ್ಲಾಡಿಸಲಾಗದು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ನುಡಿದರು.
ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೆವಾ ಸಂಘದ , ಶತಮಾನೋತ್ಸವ ಪ್ರಯುಕ್ತ, ಕೂಡ್ಲಿಗಿ ಶಾಖೆಯಿಂದ ಆಯೋಜಿಸಲಾಗಿದ್ದ, ಬೃಹತ್ ಪಥ ಸಂಚಲನ ಕಾರ್ಯಕ್ರಮದಲ್ಲಿ ಗಣವೇಶಧಾರಿಯಾಗಿ ಪಾಲ್ಗೊಂಡು ನಂತರ ಹಿರೇಮಠ ವಿದ್ಯಾಪೀಠ ಪ್ರೌಢಶಾಲಾವರಣದಲ್ಲಿ , ಆಯೋಜಿಸಲಾಗಿದ್ದ ಶತಮಾನೊತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
RSS ದೇಶದ ರಕ್ಷಣೆ ವಿಷಯದಲ್ಲಿ, ಸಾಮಾಜಿಕ ಸ್ವಾಸ್ಥ್ಯ ವಿಷಯದಲ್ಲಿ ಯಾವುದೇ ಕಾರಣಕ್ಕೆ ರಾಜಿ ಮಾಡಿಕೊಳ್ಳುವುದಿಲ್ಲ, RSS ನಿಷೇಧ ಕುರಿತು ಮಾತನಾಡಿದರಿಗೆ ಹಾಗೂ ಪಥ ಸಂಚಲನಕ್ಕೆ ಅನಾನುಕೂಲ ಸೃಷ್ಠಿ ಮಾಡುವವರಿಗೆ , ಪ್ರಜಾ ಪ್ರಭುತ್ಬ ವ್ಯವಸ್ತೆಯಲ್ಲಿ ಮುಂದಿನ ದಿನಗಳಲ್ಲಿ ಜನರೇ ಉತ್ತರ ನೀಡಲಿದ್ದಾರೆಂದು ಅವರು ಮಾರ್ಮಿಕವಾಗಿ ನುಡಿದರು.
ಪಟ್ಟಣದ ಬೆಂಗಳೂರು ರಸ್ತೆಯ ಸಂತೆ ಮೈದಾನದಲ್ಲಿ , ಗಣ ವೇಷಧಾರಿಗಳು ಪಥ ಸಂಚನಕ್ಕೂ ಮುನ್ನ ಬೈಠಾಕ್ ನಡೆಸಿದರು. ಜಗನ್ಮಾಥೆಯ ಭಾವಚಿತ್ರಕ್ಕೆ ಹಾಗೂ ಧ್ವಜಕ್ಕೆ ಪೂಜೆ ಸಲ್ಲಿಸಿ , ನಂತರ ಸ್ವಯಂ ಸೇವಾ ಸಂಘದ ಗೀತೆಯನ್ನು ಹಾಡಿ. ಧ್ವಜ ವಂದನೆ ಸಲ್ಲಿಸಿದ ನಂತರ ನಿಯಮಾನುಸಾರ , ಪಥ ಸಂಚಲನ ಆರಂಭಿಸಲಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD