ಚಿಕಿತ್ಸೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ವೈದ್ಯನ ಬಂಧನ

ಬೆಂಗಳೂರು: ಚರ್ಮ ಸೋಂಕು ಸಂಬಂಧಿತ ಚಿಕಿತ್ಸೆ ಪಡೆಯಲು ಬಂದಿದ್ದ 21 ವರ್ಷದ ಯುವತಿಗೆ ವೈದ್ಯನೊಬ್ಬ ಚಿಕಿತ್ಸೆ ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿ ವೈದ್ಯನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅ.18ರಂದು ವೈದ್ಯ ನಡೆಸುತ್ತಿದ್ದ ಖಾಸಗಿ ಕ್ಲಿನಿಕ್ ಗೆ ಯುವತಿ ಹೋಗಿದ್ದಳು. ಚಿಕಿತ್ಸೆ ನೀಡುವ ವೇಳೆ ವೈದ್ಯ ದೈಹಿಕ ಹಾಗೂ ಲೈಂಗಿಕ ದುರುದ್ದೇಶದಿಂದ ಯುವತಿಯ ಅಂಗಾಂಗ ಮುಟ್ಟಿದ್ದು, 30 ನಿಮಿಷಗಳ ಕಾಲ ಮಾತನಾಡಿ, ತಬ್ಬಿಕೊಂಡು ಎದೆಯ ಭಾಗ ಮುಟ್ಟಿದ್ದಾರೆ. ಮುತ್ತು ನೀಡಿ ಬಲವಂತವಾಗಿ ಬಟ್ಟೆ ಬಿಚ್ಚಿಸಿ ಕಿರುಕುಳ ನೀಡಿದ್ದಲ್ಲದೇ, ರೂಮ್ ಬುಕ್ ಮಾಡುತ್ತೇನೆ ಸಹಕರಿಸು ಎಂದು ವೈದ್ಯ ಕಿರುಕುಳ ನೀಡಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಪ್ರತಿ ಬಾರಿ ನಾನು ಚಿಕಿತ್ಸೆಗೆಂದು ತಂದೆಯೊಂದಿಗೆ ಬರುತ್ತಿದ್ದೆ. ಈ ಬಾರಿ ತಂದೆ ಕೆಲಸ ಇದ್ದುದರಿಂದ ನಾನೊಬ್ಬಳೇ ಹೋಗಿದ್ದೆ. ಈ ಸಂದರ್ಭವನ್ನು ಅವರು ದುರುಪಯೋಗಪಡಿಸಿಕೊಂಡು ನನಗೆ ಲೈಂಗಿಕ ಕಿರುಕುಳ ನೀಡಿದರು ಎಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇನ್ನೂ ಯುವತಿ ನೀಡಿದ ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ ಎಸ್) ಸೆಕ್ಷನ್ 75ರಡಿ ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD