12:51 PM Thursday 16 - October 2025

ದಿಲ್ಲಿಯಲ್ಲಿ ಆರ್ ಎಸ್ ಎಸ್ ನ ಹೊಸ ಕಚೇರಿ ನಿರ್ಮಾಣ: ವೆಚ್ಚ ಎಷ್ಟು ಆಗುತ್ತೆ ಗೊತ್ತಾ?

13/02/2025

ಆರ್ ಎಸ್ ಎಸ್ ಗೆ ದೆಹಲಿಯಲ್ಲಿ ಹೊಸ ಕಚೇರಿ ನಿರ್ಮಾಣವಾಗಲಿದೆ. ನಾಲ್ಕು ಎಕರೆ ಪ್ರದೇಶದಲ್ಲಿ ಕೇಶವ ಕುಂಜ್ ಎಂಬ ಹೆಸರಲ್ಲಿ ಈ ಕಚೇರಿ ನಿರ್ಮಾಣವಾಗಲಿದೆ.

ಒಟ್ಟು 150 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದ್ದು ಒಟ್ಟು ಮೂರು ಕಟ್ಟಡಗಳನ್ನು ಇಲ್ಲಿ ಕಟ್ಟಲಾಗುತ್ತದೆ. 270 ಕಾರುಗಳನ್ನು ನಿಲ್ಲಿಸುವುದಕ್ಕಿರುವ ಸ್ಥಳಾವಕಾಶ, ಸಾವಿರದ ಮುನ್ನೂರಕ್ಕಿಂತಲೂ ಅಧಿಕ ಮಂದಿ ಕುಳಿತುಕೊಳ್ಳಬಹುದಾದ ಮೂರು ಅತ್ಯಾಧುನಿಕ ಆಡಿಟೋರಿಯಂ ಗಳು, ಸಂಶೋಧನೆಗಾಗಿ ಪ್ರತ್ಯೇಕವಾಗಿ ರೂಪಿಸಲಾಗಿರುವ ಲೈಬ್ರರಿ, ಐದು ಬೆಡ್ ಗಳಿರುವ ಆಸ್ಪತ್ರೆ, ಹನುಮಾನ್ ಮಂದಿರ ಮುಂತಾದವು ಇಲ್ಲಿ ಇರಲಿದೆ.

ದೆಹಲಿಯ ದೀನ್ ದಯಾಲ್ ಉಪಾಧ್ಯಾಯ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗಿಂತಲೂ ಈ ಆರ್ ಎಸ್ ಎಸ್ ಕಚೇರಿ ದೊಡ್ಡದಿದೆ. ಈ ಕಚೇರಿ ನಿರ್ಮಾಣಕ್ಕಾಗಿ 75,000 ಕ್ಕಿಂತಲೂ ಅಧಿಕ ಮಂದಿಯಿಂದ ಚಂದಾ ಸಂಗ್ರಹಿಸಿರುವುದಾಗಿ ಆರ್‌ಎಸ್‌ ಹೇಳಿದೆ. ಕಳೆದ 8 ವರ್ಷಗಳಿಂದ ದೆಹಲಿಯ ಉದಾಸೀನ್ ಆಶ್ರಮದಿಂದ ಆರ್ ಎಸ್ ಎಸ್ ಕಾರ್ಯನಿರ್ವಹಿಸುತ್ತಿತ್ತು. ನಾಗಪುರ ಮತ್ತು ಮಧ್ಯಪ್ರದೇಶದ ಬಳಿಕ ಆರ್ ಎಸ್ ಎಸ್ ಸ್ಥಾಪಿಸಿರುವ ದೊಡ್ಡ ಕಚೇರಿ ಇದಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version