ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ವದಂತಿ: ‘ಇದು ಸುಳ್ಳು’ ಎಂದ ಫ್ಯಾಕ್ಟ್ ಸಂಸ್ಥೆಗಳು

ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಭಾರಿ ಪ್ರಮಾಣದಲ್ಲಿ ಹತ್ಯೆ ನಡೆಯುತ್ತಿವೆ ಎಂಬ ವಿಡಿಯೋಗಳನ್ನು ದೇಶದಲ್ಲಿ ಹಂಚಲಾಗುತ್ತಿದ್ದು ಹೆಚ್ಚಿನವು ಅತ್ಯಂತ ಸುಳ್ಳು ಮತ್ತು ನಕಲಿ ಮಾಹಿತಿಗಳಿಂದ ಕೂಡಿವೆ ಎಂದು ಅಲ್ ಜಝೀರಾ ಸಹಿತ ವಿವಿಧ ಫ್ಯಾಕ್ಟ್ ಸಂಸ್ಥೆಗಳು ವರದಿ ಮಾಡಿವೆ. ಇಸ್ಲಾಮಿ ಫೋಬಿಯಾವನ್ನು ಭಾರತದ ಮುಂಚೂಣಿ ಮಾಧ್ಯಮಗಳೇ ಪ್ರಚಾರ ಮಾಡುತ್ತಿರುವುದು ಆಘಾತಕಾರಿ ಎಂದು ವರದಿಗಳು ತಿಳಿಸಿವೆ.
ಟೈಮ್ಸ್ ಗ್ರೂಪ್ ನ ಮಿರರ್ ನೌ ಚಾನೆಲ್ ಪ್ರಸಾರ ಮಾಡಿರುವ ಕಾರ್ಯಕ್ರಮದ ಬಗ್ಗೆ ವಿಶೇಷವಾಗಿ ಆಲ್ ಜಝೀರ ಬೊಟ್ಟು ಮಾಡಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಸಾಮೂಹಿಕ ಹತ್ಯೆ ನಡೆಯುತ್ತಿದೆ ಎಂಬ ಶೀರ್ಷಿಕೆಯಲ್ಲಿ ಮಿರರ್ ನೌ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿದೆ. ಆದರೆ ಅದಕ್ಕೆ ಪೂರಕವಾದ ಯಾವುದೇ ದಾಖಲೆಯನ್ನು ಅದು ಒದಗಿಸಿಲ್ಲ ಎಂದು ಕೂಡ ಅಲ್ ಜಝೀರಾ ಎತ್ತಿ ಹೇಳಿದೆ.ಮಾತ್ರ ಅಲ್ಲ ಹಿಂದುಗಳದೆಂದು ಹೇಳಿ ತೋರಿಸಲಾಗಿರುವ ವಿವಿಧ ಪ್ರಕರಣಗಳು ಹಿಂದುಗಳಿಗೆ ಸಂಬಂಧಿಸಿದವುಗಳಾಗಿಲ್ಲ ಮತ್ತು ಅವಾಮಿ ಲೀಗ್ ನ ಮುಸ್ಲಿಂ ನಾಯಕರಿಗೆ ಸಂಬಂಧಿಸಿದವುಗಳಾಗಿವೆ ಎಂದು ಹೇಳಿದೆ.
ಇದೇ ರೀತಿಯಲ್ಲಿ ದೇಶದ ಹಲವು ಚಾನೆಲ್ ಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಬಾಂಗ್ಲಾ ಕ್ಕೆ ಸಂಬಂಧಿಸಿ ತಪ್ಪಾದ ಮತ್ತು ಸುಳ್ಳಾದ ಮಾಹಿತಿಗಳು ವರದಿಯಾಗುತ್ತಿವೆ ಎಂದು ಚಾನೆಲ್ ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth