ನೈಂಟಿಗೆ ಕುಸಿದ ರೂಪಾಯಿ: ಡಾಲರ್ ಎದುರು 90.15ಗೆ ಕುಸಿತ!
ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ(Indian Rupee) ಮೌಲ್ಯವು ಅಮೆರಿಕದ ಡಾಲರ್ (United States Dollar) ಎದುರು ಬುಧವಾರ 90.15ಕ್ಕೆ ಕುಸಿದಿದೆ.
ವಿದೇಶಿ ಬಂಡವಾಳದ ಹೊರಹರಿವು ನಿರಂತರವಾಗಿರುವುದು, ಕಚ್ಚಾ ತೈಲದ ಬೆಲೆಯು ಹೆಚ್ಚಳವಾಗಿರುವುದು ಕೂಡ ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗಿವೆ. ಅಮೆರಿಕ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದ ಏರ್ಪಡುವ ಬಗ್ಗೆ ಅನಿಶ್ಚಿತತೆ ಮುಂದುವರಿದಿರುವುದು, ರೂಪಾಯಿ ಮೌಲ್ಯ ಕುಸಿತವನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೆಚ್ಚಿನ ಯತ್ನ ನಡೆಸುತ್ತಿಲ್ಲದಿರುವುದು ರೂಪಾಯಿಯ ಮೇಲೆ ಒತ್ತಡ ಸೃಷ್ಟಿಸಿವೆ ಎಂದು ವರ್ತಕರು ಹೇಳಿದ್ದಾರೆ.
ಬುಧವಾರ ವಹಿವಾಟಿನ ಆರಂಭದಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು 89.96ರಷ್ಟು ಇತ್ತು. ದಿನದ ನಡುವೆ ಅದು 90.15ರವರೆಗೂ ಇಳಿದಿತ್ತು. ವಹಿವಾಟಿನ ಕೊನೆಯಲ್ಲಿ ಮೌಲ್ಯವು 90.15 ಆಗಿದೆ. ಮಂಗಳವಾರದ ಮೌಲ್ಯಕ್ಕೆ ಹೋಲಿಸಿದರೆ ಬುಧವಾರ ರೂಪಾಯಿ ಮೌಲ್ಯವು 19 ಪೈಸೆಯಷ್ಟು ಕುಸಿದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























