11:01 AM Wednesday 15 - October 2025

ಸಾಲ ನೀಡಲಿಲ್ಲ ಎಂದು ವೃದ್ಧ ದಂಪತಿಯ ಮೇಲೆ ಹಲ್ಲೆ | ವೃದ್ಧನ ದಾರುಣ ಸಾವು

12/02/2021

ಶಿವಮೊಗ್ಗ: ಸಾಲ ನೀಡಲಿಲ್ಲ ಎಂಬ ಕಾರಣಕ್ಕೆ ಅಂಗಡಿ ಮಾಲಕ ಹಾಗೂ ಅವರ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದ್ದು, ಪರಿಣಾಮವಾಗಿ ಮಾಲಕ ಸಾವನಪ್ಪಿರುವ ದಾರುಣ ಘಟನೆ  ನಡೆದಿದೆ.

ನ್ಯಾಮತಿ ತಾಲೂಕಿನ ಸಿದ್ದಾಪುರದ ವಿರೂಪಾಕ್ಷಪ್ಪ ಎಂಬವರು ಹತ್ಯೆಗೀಡಾದವರಾಗಿದ್ದಾರೆ.  ಸಿಗರೇಟ್ ಹಾಗೂ ಕಿರಾಣಿ ಸಾಮಾನು ಸಾಲ ನೀಡಲಿಲ್ಲ ಎಂದು  ಟಿ.ಮಂಜಾನಾಯ್ಕ, ಮಂಜನಾಯ್ಕ, ಸಿದ್ದೇಶ್ ನಾಯ್ಕ ಮತ್ತು ನಾಗರಾಜ್ ನಾಯ್ಕ ಎಂಬ ಆರೋಪಿಗಳು ರಾಡ್ ನಿಂದ ಹಲ್ಲೆ ನಡೆಸಿದ್ದಾರೆ.

ಈ ಘಟನೆ ಫೆ.4ರಂದು ನಡೆದಿದ್ದು, ವಿರೂಪಾಕ್ಷಪ್ಪ ಹಾಗೂ ಅವರ ಪತ್ನಿ ಪಾರ್ವತಮ್ಮ ಮೇಲೆ ರಾಡ್ ನಿಂದ ಹಲ್ಲೆ ನಡೆಸಲಾಗಿದೆ.  ಗಾಯಾಳುಗಳನ್ನು ತಕ್ಷಣವೇ  ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ  ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ಮಂಗಳೂರು ಆಸ್ಪತ್ರೆಯಲ್ಲಿ ವಿರೂಪಾಕ್ಷಪ್ಪ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ವೃದ್ಧ ದಂಪತಿಗೆ ಹಲ್ಲೆ ನಡೆಸಿ, ವೃದ್ಧನ ಸಾವಿಗೆ ಕಾರಣವಾದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪಾರ್ವತಮ್ಮ ಅವರ ಹೇಳಿಕೆಯನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version