4:09 PM Saturday 18 - October 2025

ಸಮಾಜವಾದಿ ಪಾರ್ಟಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಭೀಮ್ ಆರ್ಮಿ

bheem army
15/01/2022

ಲಖನೌ: ಉತ್ತರ ಪ್ರದೇಶದಲ್ಲಿ ‌ಚುನಾವಣಾ ಮೈತ್ರಿಗಳು ಗಂಟೆ ಗಂಟೆಗೂ ಬದಲಾಗುತ್ತಿದ್ದು, ಅಖಿಲೇಶ್ ಯಾದವ್‌ಗೆ ಪೂರ್ಣ ಬೆಂಬಲ ಘೋಷಿಸಿದ್ದ ಭೀಮ್ ಆರ್ಮಿ ಕೇವಲ 24 ಗಂಟೆಗಳಲ್ಲಿಯೇ ಯೂ ಟರ್ನ್‌ ತೆಗೆದುಕೊಂಡಿದ್ದು, ಸಮಾಜವಾದಿ ಪಾರ್ಟಿಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದೆ.

ದಲಿತರನ್ನು ಅಖಿಲೇಶ್ ಯಾದವ್‌ ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತಿದ್ದಾರೆ, ಅವರನ್ನು ಚುನಾವಣಾ ಕಣದಲ್ಲಿಳಿಸಲು ಆಹ್ವಾನ ನೀಡುತ್ತಿಲ್ಲ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಶನಿವಾರ ದೂರಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ಸೋಲಿಸಲು ಒಗ್ಗಟ್ಟು ಅತ್ಯಂತ ಮುಖ್ಯ ಎಂದು ಹೇಳಿ, ಅಖಿಲೇಶ್ ಯಾದವ್‌ ನೇತೃತ್ವದ ಮೈತ್ರಿಕೂಟ ಬೆಂಬಲಿಸುವುದಾಗಿ ಹೇಳಿದ್ದರು.

ಶುಕ್ರವಾರ ಚಂದ್ರಶೇಖರ್ ಆಜಾದ್, ತಮ್ಮ ಟ್ವಿಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿ ‘ಒಗ್ಗಟ್ಟಿನಲ್ಲಿ ದೊಡ್ಡ ಶಕ್ತಿ ಇದೆ. ಬಿಜೆಪಿ ಮಾಂತ್ರಿಕ ಪಕ್ಷ. ಒಗ್ಗಟ್ಟು ಸಾಧಿಸದೆ ಆ ಪಕ್ಷವನ್ನು ಎದುರಿಸುವುದು ತುಂಬಾ ಕಷ್ಟ. ಒಟ್ಟಿನಲ್ಲಿ ಸಮುದಾಯದ ಜನರ ಘನತೆ ಕಾಪಾಡುವುದು ಮೈತ್ರಿಕೂಟ ನಾಯಕರ ಜವಾಬ್ದಾರಿ. ಈ ಕೂಟದ ಹೊಣೆ ಅಖಿಲೇಶ್ ತೆಗೆದುಕೊಳ್ಳಬೇಕೆಂದು ದಲಿತ ಸಮುದಾಯ ಬಯಸುತ್ತಿದೆ ‘ಎಂದು ಅವರು ಟ್ವೀಟ್ ಮಾಡಿದ್ದರು.

ಆದರೆ, ಶನಿವಾರ ಬೆಳಗ್ಗೆ ತಮ್ಮ ಬೆಂಬಲ ಹಿಂಪಡೆದಿದ್ದಾರೆ. ಕಾರಣ ದಲಿತ ಸಮುದಾಯವನ್ನು ಅಖಿಲೇಶ್ ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತಿದ್ದಾರೆ ಎಂದು ಆಜಾದ್ ಟೀಕಿಸಿದ್ದಾರೆ. ‘ ಆರು ತಿಂಗಳಿನಿಂದ ‘ಅಖಿಲೇಶ್ ಯಾದವ್ ಜೊತೆ ಚುನಾವಣಾ ಮೈತ್ರಿಗಾಗಿ ಕಾಯುತ್ತಿದ್ದೆ. ಆದರೆ, ಅದು ಉತ್ತಮ ಫಲಿತಾಂಶ ನೀಡಲಿಲ್ಲ. ಅವರು ದಲಿತರ ನಾಯಕತ್ವ ಇಷ್ಟಪಡುವುದಿಲ್ಲ ಅವರು ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತಿದ್ದಾರೆ ಎಂದು ಚಂದ್ರಶೇಖರ್ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವೈದ್ಯಕೀಯ ಚಿಕಿತ್ಸೆಗಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅಮೆರಿಕಕ್ಕೆ

ವಿಷಪೂರಿತ ಮದ್ಯ ಸೇವಿಸಿ ಐವರ ದಾರುಣ ಸಾವು

ಆಸ್ಪತ್ರೆ ಆವರಣದಲ್ಲಿ ಪತ್ತೆಯಾಯ್ತು 11 ತಲೆ ಬುರುಡೆ, ಬ್ರೂಣಗಳ ಎಲುಬು!

ಈ ರಸ್ತೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ತಿಳಿದರೆ ಶಾಕ್ ಆಗುತ್ತೀರಿ!

ಯುಪಿ ಚುನಾವಣೆ: ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ; ಗೋರಖ್ ಪುರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

 

ಇತ್ತೀಚಿನ ಸುದ್ದಿ

Exit mobile version