2024ರ ಲೋಕಸಭಾ ಚುನಾವಣೆ: 11 ಅಭ್ಯರ್ಥಿಗಳನ್ನು ಘೋಷಿಸಿದ ಸಮಾಜವಾದಿ ಪಕ್ಷ

19/02/2024

ಮುಂಬರುವ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದ 11 ಸ್ಥಾನಗಳಿಗೆ ಸಮಾಜವಾದಿ ಪಕ್ಷ ಸೋಮವಾರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮುಜಾಫರ್ ನಗರದಿಂದ ಹರೇಂದ್ರ ಮಲಿಕ್, ಶಹಜಹಾನ್‌ಪುರದಿಂದ ರಾಜೇಶ್ ಕಶ್ಯಪ್, ಹರ್ದೋಯಿಯಿಂದ ಉಷಾ ವರ್ಮಾ ಮತ್ತು ಗಾಜಿಪುರದಿಂದ ಅಫ್ಜಲ್ ಅನ್ಸಾರಿ ಅವರನ್ನು ಎಸ್ಪಿ ಕಣಕ್ಕಿಳಿಸಿದೆ.

ಅನ್ವಾಲಾ, ಮಿಸ್ರಿಖ್, ಮೋಹನ್‌ಲಾಲ್ ಗಂಜ್, ಪ್ರತಾಲ್ ಗಢ, ಬೆಹ್ರೈಚ್, ಗೊಂಡಾ ಮತ್ತು ಚಂದೋಲಿ ಸ್ಥಾನಗಳಿಂದ ನೀರಜ್ ಮೌರ್ಯ, ರಾಂಪಾಲ್ ರಾಜವಂಶಿ, ಆರ್.ಕೆ.ಚೌಧರಿ, ಎಸ್.ಪಿ.ಸಿಂಗ್ ಪಟೇಲ್, ರಮೇಶ್ ಗೌತಮ್, ಶ್ರೇಯಾ ವರ್ಮಾ ಮತ್ತು ವೀರೇಂದ್ರ ಸಿಂಗ್ ಅವರನ್ನು ಪಕ್ಷ ಕಣಕ್ಕಿಳಿಸಿದೆ.

ಏತನ್ಮಧ್ಯೆ, ಸಮಾಜವಾದಿ ಪಕ್ಷವು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಗೆ 17 ಲೋಕಸಭಾ ಸ್ಥಾನಗಳನ್ನು ನೀಡಿದೆ ಮತ್ತು ಪ್ರಸ್ತಾಪವನ್ನು ಒಪ್ಪಿಕೊಂಡರೆ ಮಾತ್ರ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಸೇರುತ್ತಾರೆ ಎಂದು ಪ್ರತಿಪಾದಿಸಿದೆ.

ನಾವು ಕಾಂಗ್ರೆಸ್ ಗೆ 17 ಲೋಕಸಭಾ ಸ್ಥಾನಗಳ ಅಂತಿಮ ಪ್ರಸ್ತಾಪವನ್ನು ನೀಡಿದ್ದೇವೆ. ಮಂಗಳವಾರ ರಾಯ್ ಬರೇಲಿಯಲ್ಲಿ ನಡೆಯಲಿರುವ ನ್ಯಾಯ ಯಾತ್ರೆಯಲ್ಲಿ ಅಖಿಲೇಶ್ ಯಾದವ್ ಭಾಗವಹಿಸುವುದು ಅವರ ಸ್ವೀಕಾರದ ಮೇಲೆ ಅವಲಂಬಿತವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ ಪಿಟಿಐಗೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version