ಲೋಕ ಕದನ: ಸಮಾಜವಾದಿ ಪಕ್ಷದ 3ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಯಾರಿಗೆಲ್ಲಾ ಟಿಕೆಟ್..?

2024ರ ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜ್ನೌರ್, ಅಲಿಗಢ, ಮೀರತ್, ಹತ್ರಾಸ್, ಭದೋಹಿ, ಲಾಲ್ಗಂಜ್ ಮತ್ತು ನಾಗೌನಾ ಸೇರಿದಂತೆ ಏಳು ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಯಶ್ವೀರ್ ಸಿಂಗ್ ಅವರನ್ನು ಬಿಜನೌರ್ ನಿಂದ ಕಣಕ್ಕಿಳಿಸಲಾಗಿದೆ. ಮೀರತ್ ನಿಂದ ಭಾನುಪ್ರತಾಪ್ ಸಿಂಗ್ ಮತ್ತು ಅಲಿಗಢದಿಂದ ಬಿಜೇಂದರ್ ಸಿಂಗ್ ಸ್ಪರ್ಧಿಸಲಿದ್ದಾರೆ. ಭದೋಹಿ ಕ್ಷೇತ್ರದ ಸ್ಥಾನವನ್ನು ಟಿಎಂಸಿ ಅಭ್ಯರ್ಥಿಗೆ ನೀಡಲಾಗಿದೆ. ಸಮಾಜವಾದಿ ಪಕ್ಷದ ಮೊದಲ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಜನವರಿ 30 ರಂದು ಬಿಡುಗಡೆ ಮಾಡಲಾಗಿದ್ದು, 16 ಅಭ್ಯರ್ಥಿಗಳ ಘೋಷಣೆಯಾಗಿದೆ. ನಂತರ ಫೆಬ್ರವರಿ 19 ರಂದು ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಿಗೆ ಎಸ್ಪಿ ಈವರೆಗೆ 37 ಅಭ್ಯರ್ಥಿಗಳನ್ನು ಘೋಷಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth