2:05 PM Thursday 16 - October 2025

ಸಮುದ್ರಕ್ಕೆ ಹಾರಿ ಯುವತಿ ಆತ್ಮಹತ್ಯೆಗೆ ಯತ್ನ: ರಕ್ಷಿಸಲು ಹೋದ ಸ್ನೇಹಿತನೇ ಸಮುದ್ರಪಾಲು

ullala
29/01/2022

ಉಳ್ಳಾಲ: ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸಲು ಹೋದ ಆಕೆಯ ಸ್ನೇಹಿತ ಸಮುದ್ರಪಾಲದ ಘಟನೆ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.

ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜಾ (28) ಮೃತ ಯುವಕ. ಈತನ ಸ್ನೇಹಿತೆ ಅಶ್ವಿತಾ ಫೆರಾವೋರನ್ನು ಸ್ಥಳೀಯ ಜೀವ ರಕ್ಷಕ ಈಜುಗಾರರು ರಕ್ಷಿಸಿದ್ದಾರೆ. ಸದ್ಯ ಆಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಲಾಯ್ಡ್ ಡಿಸೋಜಾ ಅಶ್ವಿತಾಳನ್ನು ಕಳೆದ 8 ವರ್ಷದಿಂದ ಪ್ರೀತಿಸುತ್ತಿದ್ದನಂತೆ. ಆದರೆ, ಈ ನಡುವೆ ಲಾಯ್ಡ್ ಇನ್ನೊರ್ವ ಯುವತಿಯನ್ನು ಪ್ರೀತಿಸುತ್ತಿದ್ದಾನೆ ಎಂದು ಅಶ್ವಿತಾಳ ಆರೋಪವಾಗಿತ್ತು.

ಈ ಹಿನ್ನೆಲೆ ಮಾತುಕತೆಗೆ ಸೋಮೇಶ್ವರ ಸಮುದ್ರ ತೀರಕ್ಕೆ ಬಂದಿದ್ದರು. ಈ ವೇಳೆ, ಲಾಯ್ಡ್ ಮತ್ತು ಅಶ್ವಿತಾಳ ನಡುವೆ ಮಾತಿನ ಚಕಮಕಿ ನಡೆದು, ಆಕೆ ಸಮುದ್ರಕ್ಕೆ ಹಾರಿದ್ದಾಳೆ. ಆಕೆಯನ್ನು ರಕ್ಷಿಸುವ ಭರದಲ್ಲಿ ಲಾಯ್ಡ್ ಕೂಡ ಸಮುದ್ರಕ್ಕೆ ಹಾರಿದ್ದಾನೆ. ಸ್ಥಳೀಯ ಜೀವ ರಕ್ಷಕರಾದ ಅಶೋಕ್ ಮತ್ತು ಅವರ ತಂಡ ಅಶ್ವಿತಾಳನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ.

ಆದರೆ, ಲಾಯ್ಡ್ ಡಿ‌ಸೋಜಾ ಸಮುದ್ರದಲ್ಲಿ‌ ಮುಳುಗಿದ್ದು, ಆತನನ್ನು ರಕ್ಷಣೆಗೆ ಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಂದೂಗಳಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ: ಆಕ್ಷೇಪಾರ್ಹ ಬ್ಯಾನರ್ ಅಳವಡಿಕೆ

ಅಲೆಮಾರಿ ಸಮುದಾಯದ ವ್ಯಕ್ತಿಗೆ ಬೆದರಿಕೆ: ತಹಶೀಲ್ದಾರ್ ವಿರುದ್ಧ ಎಫ್ ​ಐ ಆರ್​ ದಾಖಲು

ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಕತ್ತು ಕೊಯ್ದು ಕೊಲೆಗೈದ ಪತಿ

ಯಡಿಯೂರಪ್ಪನವರ ಮೊಮ್ಮಗಳ ಆತ್ಮಹತ್ಯೆಗೆ ಕಾರಣ ಏನು?

ಭೀಕರ ಚಳಿಗೆ ನಾಲ್ವರು ಭಾರತೀಯರ ಸಾವು; ಗುರುತು ಪತ್ತೆ

 

ಇತ್ತೀಚಿನ ಸುದ್ದಿ

Exit mobile version