11:55 PM Tuesday 18 - November 2025

ವಿವಾದದ ಗೂಡಾದ ಸಂಶಿದ್ ಸ್ಕೂಲ್; ಪೊಲೀಸ್ ದಾಳಿಗೆ ಮಕ್ಕಳ ಪೋಷಕರು ಕಂಗಾಲು

mount litera zee school
23/06/2023

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮೇಲೆ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಪೊಲೀಸರು ದಾಳಿ ನಡೆಸಿ ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಬೆಂಗಳೂರಿನ HSR ಲೇಔಟ್ ಬಳಿಯ ಪ್ರತಿಷ್ಠಿತ ಮೌಂಟ್ ಲಿಟೆರಾ ಜೀ ಸ್ಕೂಲ್ ಸಂಸ್ಥೆಗೊಳಪಟ್ಟ ಶಾಲೆಯ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕೋರ್ಟ್ ಆದೇಶದಂತೆ ಸರ್ಚ್ ವಾರೆಂಟ್ ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಪ್ರತಿಷ್ಠಿತ ಸಂಶಿಧ್ ಎಜುಕೇಶನಲ್ ಸೊಸೈಟಿ ಮಾಲೀಕತ್ವದ ಶಾಲೆ ವಿರುದ್ಧ ಬೇರೆ ಕಂಪನಿಯ ಲೋಗೋ ಬಳಸಿ ಹಣ ವಂಚಿಸಿದ ಆರೋಪ ಇದೆ. ZEE LEARN LIMITED ಕಂಪನಿ ಲೋಗೋ ಬಳಕೆಯ ಆರೋಪ ಇದಾಗಿದ್ದು, ವಿವಾದ ಸಂಬಂಧ ಸಂಶಿದ್ ಎಜುಕೇಶನ್ ಸೊಸೈಟಿ ಮಾಲೀಕ ವಾಸ ಶ್ರೀನಿವಾಸ್ ರಾವ್ ಅವರ ವಿರುದ್ದ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಈ ಎಫ್ ಐಅರ್ ಆಧಾರದಲ್ಲಿ HSR ಲೇಔಟ್ ಬಳಿಯ ಶಾಲೆ ಮೇಲೆ ಪೊಲೀಸರು ಗುರುವಾರ ದಾಳಿ ಮಾಡಿ ಎಸಿಪಿ ನೇತೃತ್ವದ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಸಂಶಿದ್ ಎಜುಕೇಶನ್ ಸೊಸೈಟಿ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳು ZEE LEARN LIMITED ಟ್ರೇಡ್ ಮಾರ್ಕ್ ಅಕ್ರಮವಾಗಿ ಬಳಸಿರುವ ಬಗ್ಗೆ ‘ವೆಂಕಟರಾಮು’ ಎಂಬವರು ನೀಡಿರುವ ದೂರು ನೀಡಿದ್ದರು. 34 ವರ್ಷಗಳ ವರೆಗೆ ಲೋಗೋ ಬಳಕೆ ಸಂಬಂಧ ಒಪ್ಪಂದ ಇದೆ ಎನ್ನಲಾಗಿದ್ದು, ಒಪ್ಪಂದ ಮುಂದುವರಿಯದಿದ್ದರೂ ಸಂಶಿದ್ ಎಜುಕೇಶನ್ ಸೊಸೈಟಿ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳು ZEE LEARN LIMITED ಟ್ರೇಡ್ ಮಾರ್ಕ್ ಲೋಗೋ ಬಳಸಿ, ಆನ್‌ಲೈನ್, ಆಫ್ ಲೈನ್ ಕೋರ್ಸ್ ನಡೆಸಿದೆ ಎಂದು ಆರೋಪಿಸಲಾಗಿದೆ. 3 ವರ್ಷಗಳಲ್ಲಿ ಸುಮಾರು 3.37 ಕೋಟಿ ರೂಪಾಯಿಗೂ ಹೆಚ್ಚಿನ ರಾಯಲ್ಟಿ ನೀಡದೆ ಈ ಶಿಕ್ಷಣ ಸಂಸ್ಥೆ ವಂಚಿಸಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಈ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸರು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಈ ಸಂಶಿದ್ ಸ್ಕೂಲ್ ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ವಿವಾದಕ್ಕೊಳಗಾಗಿತ್ತು. ವರ್ಷಗಳ ಹಿಂದೆ ಆರ್‌ ಟಿ‌ಐ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ನಡೆಸಿರುವ ಬಗ್ಗೆ ಆರೋಪ ಇತ್ತು. ವಿದ್ಯಾರಣ್ಯಪುರ ಬಳಿಯ ಶಾಲೆಯ ವಿರುದ್ದ ಈ ಆರೋಪ ಕೇಳಿ ಬಂದಿತ್ತು. ಆ ಬಗ್ಗೆ ತನಿಖೆ ಪ್ರಗತಿಯಲ್ಲಿರುವಾಗಲೇ ಇದೀಗ ಮತ್ತೊಂದು ಪ್ರಕರಣ ಬಯಲಾಗಿದೆ. ಗುರುವಾರ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ನಡೆಸಿರುವ ಕಾರ್ಯಾಚರಣೆಯಿಂದಾಗಿ ಪೋಷಕರು ಗಲಿಬಿಲಿಗೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version