10:07 PM Thursday 23 - October 2025

ಫೆಲೆಸ್ತೀನ್ ಇಸ್ರೇಲ್ ಸಂಘರ್ಷ: ಫೆಲೆಸ್ತೀನ್ ಜೊತೆ ಇದ್ದೇನೆ ಎಂದು ಹೇಳಿದ ಸೌದಿ ಅರೇಬಿಯಾ

11/10/2023

ಫೆಲೆಸ್ತೀನ್ – ಇಸ್ರೇಲ್ ನಡುವೆ ಘರ್ಷಣೆ ಮುಂದುವರೆದಿರುವಂತೆಯೇ ಸೌದಿ ಅರೇಬಿಯಾ ಮಹತ್ವದ ಹೇಳಿಕೆಯನ್ನು ಹೊರಡಿಸಿದೆ. ನ್ಯಾಯ ಮತ್ತು ಹಕ್ಕು ಫೆಲೆಸ್ತೀನಿಯರಿಗೆ ಲಭಿಸುವವರೆಗೆ ತಾನು ಫೆಲೆಸ್ತೀನ್ ಜೊತೆ ಇದ್ದೇನೆ ಎಂದು ಸೌದಿ ಅರೇಬಿಯಾ ಘೋಷಿಸಿದೆ.

ಫೆಲೆಸ್ತೀನ್ ಅಥಾರಿಟಿಯ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರು ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಜೊತೆ ದೂರವಾಣಿ ಮೂಲಕ ಮಾತಾಡಿದ್ದಾರೆ. ಇದೇ ವೇಳೆ ಫೆಲೆ ಸ್ತೀನ್ ನ ಸಮಸ್ಯೆಗಳು ಮತ್ತು ಸಂಕಟಗಳ ಬಗ್ಗೆ ಮೊಹಮ್ಮದ್ ಅಬ್ಬಾಸ್ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರಲ್ಲಿ ವಿವರಿಸಿದ್ದಾರೆ.

ಈ ಸಂಘರ್ಷವನ್ನು ಯಾವುದಾದರೂ ರೀತಿಯಲ್ಲಿ ನಿಲ್ಲಿಸಬೇಕು ಮತ್ತು ಫೆಲೆ ಸ್ತೀನ್ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಮೊಹಮ್ಮದ್ ಬಿನ್ ಸಲ್ಮಾನ್ ಈ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ. ಮಾತ್ರ ಅಲ್ಲ ನಾವು ಫೆಲೆ ಸ್ತೀನ್ ಜೊತೆ ಇರುತ್ತೇವೆ. ನ್ಯಾಯ ಮತ್ತು ಅದರ ಹಕ್ಕು ಲಭ್ಯವಾಗುವವರೆಗೆ ನಾವು ಎಂದು ಕೂಡ ಫೆಲೆ ಸ್ತೀನ್ ಕೈ ಬಿಡಲ್ಲ ಎಂದು ರಾಜಕುಮಾರ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version