12:57 PM Tuesday 21 - October 2025

ಬ್ರೇಕಿಂಗ್ ನ್ಯೂಸ್: ಶಾಲೆ ಆರಂಭ ಯಾವಾಗ? | ಇಲ್ಲಿದೆ ಮಾಹಿತಿ

28/10/2020

ನವದೆಹಲಿ:  ನವೆಂಬರ್ ಅಂತ್ಯದವರೆಗೂ ಅನ್ ಲಾಕ್ 5.0 ವಿಸ್ತರಣೆ ಮಾಡಲಾಗಿದ್ದು, ಈ ಕಾರಣದಿಂದಾಗಿ ನವೆಂಬರ್ 30ರವರೆಗೂ ಶಾಲಾ ಕಾಲೇಜುಗಳನ್ನು ತೆರೆಯುವಂತಿಲ್ಲ ಎಂದು ಸರ್ಕಾರ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.




 

ಶಾಲೆ ತೆರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ದಿನಾಂಕ ಮುಂದೂಡಿಕೆಯಾಗಿದೆ. ಪ್ರತಿ ಬಾರಿಯೂ ಸರ್ಕಾರವು ಶಾಲೆ ತೆರೆಯುವ ವಿಚಾರವಾಗಿ ದಿನಾಂಕಗಳನ್ನು ಘೋಷಿಸುತ್ತಲೇ ಇದೆ ಆದರೆ, ಕೊವಿಡ್ ನಿಯಂತ್ರಣ ಸಾಧ್ಯವಾಗದ ಹಿನ್ನೆಲೆಯಲ್ಲಿ ಮತ್ತೆ ದಿನಾಂಕ ವಿಸ್ತರಣೆ ಮಾಡಲಾಗುತ್ತಿದೆ.


ಮೆಟ್ರೊ ರೈಲು, ಮಾಲ್ ಗಳು, ಹೋಟೆಲ್ ಗಳು, ಧಾರ್ಮಿಕ ಸ್ಥಳಗಳು ಮುಂತಾದ ಬೃಹತ್ ಪ್ರಮಾಣದ ಸಭೆಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪುನರಾರಂಭಿಸಲು ಕೆಲವು ನಿರ್ಬಂಧಗಳೊಂದಿಗೆ ಅನುಮತಿ ನೀಡಲಾಗಿದೆ. ಆದರೆ ಶಾಲೆಗಳನ್ನು ತೆರೆಯಲು ಅನುಮತಿ ನೀಡಲಾಗಿಲ್ಲ. ಸಾರ್ವಜನಿಕರು ಸಹಜವಾಗಿಯೇ ಕೊರೊನಾ ಜೊತೆಗೆ ಬದುಕಲು ಕಲಿತಿದ್ದಾರೆ. ಶಿಕ್ಷಣ ಸಂಸ್ಥೆಗಳು ಮುಚ್ಚಿರುವುದು, ದೇಶದ ಭವಿಷ್ಯಕ್ಕೆ ಉತ್ತಮವಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ.


ಇತ್ತೀಚಿನ ಸುದ್ದಿ

Exit mobile version