1:41 PM Thursday 16 - October 2025

ದುರಂತ: ಶಾಲೆಗೆ ಹೋಗದಿದ್ದಕ್ಕೆ ತಾಯಿ ಬೈದಿದ್ದಕ್ಕೆ ರೈಲಿಗೆ ಹಾರಿ ಬಾಲಕಿ ಆತ್ಮಹತ್ಯೆ

08/12/2023

ಶಾಲೆಗೆ ಹೋಗದಿದ್ದಕ್ಕೆ ತಾಯಿ ಬೈದಿದ್ದಕ್ಕೆ ಮನನೊಂದ ಹದಿಹರೆಯದ ಬಾಲಕಿಯೊಬ್ಬಳು ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, 13 ವರ್ಷದ ಖುಷಿ ಶರ್ಮಾ ಬುಧವಾರ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಇದರಿಂದ ಕೋಪಗೊಂಡ ತಾಯಿ ತನ್ನ ಮಗಳು ಶಾಲೆಗೆ ಹೋಗಬೇಕೆಂದು ಒತ್ತಾಯಿಸಿದ್ದರಿಂದ ಬೈದು‌ ಕಪಾಳಮೋಕ್ಷ ಮಾಡಿದ್ದರು.

ಆದರೆ, ರಣವೀರ್ ಶರ್ಮಾ ಅವರ ಮಗಳು ಖುಷಿ ಶಾಲೆಗೆ ಹೋಗುವ ಬದಲು ಅಲ್ವಾರ್-ಮಥುರಾ ರೈಲ್ವೆ ಹಳಿಗೆ ಹೋಗಿ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆಗೆ ಸಾಕ್ಷಿಯಾದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಕೆಯ ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version