6:29 AM Monday 15 - September 2025

ಯುವತಿಯರೇ ಎಚ್ಚರ!:  ಇನ್‌ ಸ್ಟಾಗ್ರಾಮ್‌ ನಲ್ಲಿ ಯುವತಿಯರ ಫೋಟೋ, ರೀಲ್ಸ್‌ ಕದ್ದು ಈತ ಮಾಡಿದ್ದೇನು ನೋಡಿ

raghavendra
27/11/2023

ಬೆಂಗಳೂರು: ಯುವಕನೋರ್ವ ನೂರಾರು ಯುವತಿಯರ ಜೊತೆ ಚಾಟಿಂಗ್ ಮಾಡಿ, ನಕಲಿ ಖಾತೆ ಸೃಷ್ಟಿಸಿ ಸಿಕ್ಕಿಬಿದ್ದಿದ್ದಾನೆ. ಈ ಖದೀಮನ ಹೆಸರು ರಾಘವೇಂದ್ರ. ಉತ್ತರಹಳ್ಳಿಯ  ನಿವಾಸಿಯಾಗಿರುವ ರಾಘವೇಂದ್ರ ನೋಡಲು ಡೀಸೆಂಟ್ ಹುಡುಗನ ಥರ ಕಾಣಿಸಿದರೂ ಮಹಾನ್ ಕಿಲಾಡಿ. ಅಲ್ಲದೇ ಸೈಬರ್ ಕಳ್ಳ ಕೂಡ.

ಇನ್ಸ್ಟಾಗ್ರಾಂನಲ್ಲಿ ಯುವತಿಯರ ಫೋಟೋ, ರೀಲ್ಸ್ ವೀಡಿಯೋಗಳನ್ನು ಕದ್ದು, ಫೇಸ್‌ ಬುಕ್‌ನಲ್ಲಿ  ನಕಲಿ ಖಾತೆ ಸೃಷ್ಟಿಸಿ ನೂರಾರು ಜನರಿಂದ ಹಣ ಹಾಕಿಸಿಕೊಂಡು ಮೋಸ ಮಾಡುತ್ತಿದ್ದ ಖತರ್ನಾಕ್ ಸೈಬರ್ ಕಳ್ಳ ಇದೀಗ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಯುವತಿಯರ ಫೋಟೋಗಳನ್ನ ಬಳಸಿಕೊಂಡು ರಾಘವೇಂದ್ರ ಬ್ಲಾಕ್ ಮೇಲ್ ಮಾಡುತ್ತಿದ್ದ. ವೇಶ್ಯಾವಾಟಿಕೆ ದಂಧೆಗೂ ಈ ಫೋಟೋಗಳನ್ನು ಶೇರ್ ಮಾಡುತ್ತಿದ್ದ. ಇಂತಹ ಖದೀಮನ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೇ ಸಂತ್ರಸ್ತ ಯುವತಿಗೆ ಕಾಂಪ್ರಮೈಸ್ ಮಾಡಿಕೊಳ್ಳಿ ಎಂದು ಒತ್ತಡ ಹಾಕುತ್ತಿದ್ದಾರೆ. ಕೃತ್ಯವೆಸಗಿದ ರಾಘವೇಂದ್ರನ ಮೊಬೈಲ್ ಫೋನ್ ಪೊಲೀಸರು ವಶ ಪಡಿಸಿಕೊಂಡು ಪರಿಶೀಲನೆ ಮಾಡಿದಾಗ ನೂರಾರು ಯುವತಿಯರಿಗೆ ಚಾಟಿಂಗ್ ಮಾಡಿದ್ದು, ಹಣ ಹಾಕಿಸಿಕೊಂಡಿರುವುದು, ನಕಲಿ ಖಾತೆಗಳನ್ನು ಸೃಷ್ಟಿಸಿರೋದು ಪತ್ತೆಯಾಗಿದೆ.

ಕಮಲಾನಗರದ ತ್ರಿವೇಣಿ  ಯುವತಿ ಸೈಬರ್ ಕಳ್ಳನ ಟಾರ್ಚರ್‌ಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ರಾಘವೇಂದ್ರ ಒಂದು ವರ್ಷದಿಂದ, ತ್ರಿವೇಣಿಯ ಫೋಟೋ, ವೀಡಿಯೋಗಳನ್ನು ಬಳಸಿಕೊಂಡು ನಕಲಿ ಫೇಸ್‌ ಬುಕ್ ಖಾತೆ ತೆರೆದಿದ್ದ. ತ್ರಿವೇಣಿಯ, ಸ್ನೇಹಿತರಿಗೆ ಸಂಬಂಧಿಕರಿಗೆ ಫೇಸ್‌ ಬುಕ್ ಮೆಸೆಂಜರ್‌ನಲ್ಲಿ ಚಾಟ್ ಮಾ̧ಡಿ ಈ ಖದೀಮ ಹಣವನ್ನು ಪಡೆಯುತ್ತಿದ್ದ. ಈ ವಿಚಾರ ತ್ರಿವೇಣಿ ಗಮನಕ್ಕೆ ಬಂದಾಗ, ಅವರ ಸ್ನೇಹಿತರ ಮೂಲಕ ಬೆಂಗಳೂರಿನಲ್ಲೇ ಕುಳಿತು ಯುವತಿಯ ಫೋಟೋ ದುರುಪಯೋಗಪಡಿಸಿಕೊಂಡು ಹಣ ಮಾಡುತ್ತಿದ್ದ ಈತನನ್ನು ರೆಡ್‌ ಹ್ಯಾಂಡ್ ಆಗಿ ಹಿಡಿದು, ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಹೀಗೆ ಎಂಟತ್ತು ಹುಡುಗಿಯರ ಹೆಸರಲ್ಲಿ ನಕಲಿ ಖಾತೆ ತೆರೆದು ಈವರೆಗೆ 80 ಲಕ್ಷಕ್ಕೂ ಅಧಿಕ ಹಣವನ್ನು ದೋಚಿದ್ದಾನೆ.

ಸಂತ್ರಸ್ತೆಯ ದೂರು ಪಡೆದು ಐಪಿಸಿ ಸೆಕ್ಷನ್‌ ಗಳನ್ನು ಹಾಕದೇ ಕೇವಲ ಎನ್‌ ಸಿಆರ್ ಮಾಡಿಕೊಂಡು, ಕಾಂಪ್ರಮೈಸ್ ಆಗಿ ಎಂದು ಸಂತ್ರಸ್ತ ಯುವತಿಗೆ ಪೊಲೀಸರು ಮನವೊಲಿಸುತ್ತಿದ್ದಾರೆ. ದೂರು ಕೊಟ್ಟರೆ ಡೀಪ್‌ ಫೇಕ್ ಮಾಡಿ ಮಾನ, ಮಾರ್ಯದೆ ತೆಗೆಯುತ್ತೇನೆ ಎಂದು ಅವಾಜ್ ಹಾಕುತ್ತಿದ್ದ ಈ  ಖದೀಮನ ಮೇಲೆ ಪೊಲೀಸರು ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ತೋರಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ

Exit mobile version