ಪಬ್ ಜಿ ಲವ್: ಭಾರತೀಯ ಪೌರತ್ವ ಕೋರಿ ಅರ್ಜಿ ಸಲ್ಲಿಸಿದ ಸೀಮಾ ಹೈದರ್

ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ನೋಯ್ಡಾ ಮೂಲದ ಪ್ರಿಯಕರ ಸಚಿನ್ ಮೀನಾ ಅವರೊಂದಿಗೆ ಉಳಿದುಕೊಂಡಿದ್ದಕ್ಕಾಗಿ ತನಿಖೆ ಎದುರಿಸುತ್ತಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರು ಭಾರತೀಯ ಪೌರತ್ವ ಕೋರಿ ರಾಷ್ಟ್ರಪತೊ ದ್ರೌಪದಿ ಮುರ್ಮು ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ವಕೀಲ ಎಪಿ ಸಿಂಗ್ ಮೂಲಕ ರಾಷ್ಟ್ರಪತಿ ಮುರ್ಮು ಅವರಿಗೆ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯಲ್ಲಿ ಸೀಮಾ ಹೈದರ್ ಅವರು ಭಾರತೀಯ ನಾಗರಿಕ ಸಚಿನ್ ಮೀನಾ ಅವರನ್ನು ಮದುವೆಯಾದ ಆಧಾರದ ಮೇಲೆ ತನಗೆ ಭಾರತೀಯ ಪೌರತ್ವವನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.
ತಾನು ಈಗ ಭಾರತದ ಸೊಸೆ ಎಂದು ಹೇಳಿಕೊಂಡಿರುವ ಸೀಮಾ ಹೈದರ್, ಭಾರತದಲ್ಲಿ ಉಳಿಯಲು ಸರ್ಕಾರದಿಂದ ಅನುಮತಿ ಕೋರಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ತಾನು ಗಾಢವಾಗಿ ಪ್ರಭಾವಿತನಾಗಿದ್ದೇನೆ ಎಂದಿದ್ದಾರೆ.
ತಾನು ಹಿಂದೂ ಧರ್ಮವನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದೇನೆ. ಭಾರತೀಯ ಸಂಸ್ಕೃತಿ, ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಕಲಿಯಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಭಾರತಕ್ಕೆ ಅಕ್ರಮ ಪ್ರವೇಶ ಮತ್ತು ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್ಐ ಜೊತೆಗಿನ ಸಂಪರ್ಕದ ಬಗ್ಗೆ ತನಿಖೆ ನಡೆಯುತ್ತಿರುವ ಸಮಯದಲ್ಲಿ ಅವರು ರಾಷ್ಟ್ರಪತಿಗೆ ಈ ಅರ್ಜಿ ಸಲ್ಲಿಸಿದ್ದಾರೆ.
ಪಾಕಿಸ್ತಾನದಿಂದ ನೇಪಾಳದ ಮೂಲಕ ಭಾರತಕ್ಕೆ ಬಂದ ಪ್ರಯಾಣದ ಬಗ್ಗೆ ಯುಪಿ ಎಟಿಎಸ್ ಮತ್ತು ಇತರ ಗುಪ್ತಚರ ಸಂಸ್ಥೆಗಳು ತೀವ್ರ ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಈಗ ಪಾಕಿಸ್ತಾನಿ ‘ಭಾಬಿ’ ಎಂದು ಕರೆಯಲ್ಪಡುವ ಸೀಮಾ ಹೈದರ್ ಸುತ್ತಲಿನ ರಹಸ್ಯವು ಮತ್ತಷ್ಟು ಗಾಢವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw