7:46 AM Thursday 18 - December 2025

ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ | ಜಿಲ್ಲಾಧ್ಯಕ್ಷರಾಗಿ ಹರೀಶ್ ಕೊಂಡಾಡಿ, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ನೀರೇ ಆಯ್ಕೆ

ambedkar sene
31/10/2023

ಕಾರ್ಕಳ: ಕಾರ್ಕಳ ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಅಂಬೇಡ್ಕರ್ ಸೇನೆಯ ಉಡುಪಿ ಜಿಲ್ಲಾ ಸಭೆ ನಡೆಯಿತು.

ಇದೇ ವೇಳೆ ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲೆಯ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು. ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಡಾ.ಪಿ. ಮೂರ್ತಿ ಅವರ ಸೂಚನೆಯ ಮೇರೆಗೆ ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾಧ್ಯಕ್ಷರಾಗಿ ಹರೀಶ್ ಕೊಂಡಾಡಿ ಉಪಾಧ್ಯಕ್ಷರಾಗಿ ಸಂಜೀವ ಮಾಳ ಅವರನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ನೀರೇ ಕಾರ್ಯದರ್ಶಿಯಾಗಿ ರವಿ ಮುಂಡ್ಲಿ ಸಂಘಟನ ಕಾರ್ಯದರ್ಶಿ ಸುಧೀರ್, ಹರೀಶ್ ಜಾರ್ಕಳ, ದಿನೇಶ್ ಕೌಡೂರು ಇವರನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾ ಗೌರವಾಧ್ಯಕ್ಷ ಸತೀಶ್ ಕುಮಾರ್ ಬೈಲೂರ್ ಮಹಿಳಾ ಜಿಲ್ಲಾಧ್ಯಕ್ಷೆ ಸೌಮ್ಯಾ ಹಾಗೂ ಉಡುಪಿ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ಅಂಬೇಡ್ಕರ್ ಸೇನೆ ಜಿಲ್ಲಾ ಗೌರವಾಧ್ಯಕ್ಷ ಸತೀಶ್ ಕುಮಾರ್ ತಿಳಿಸಿದ್ದಾರೆ.

ಹರೀಶ್ ಕೊಂಡಾಡಿ ಜಿಲ್ಲಾಧ್ಯಕ್ಷರು


 

ಇತ್ತೀಚಿನ ಸುದ್ದಿ

Exit mobile version