ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಹೆಸರಿಗೆ ಮಂಗಳ ಹಾಡಿದ ಶಾಲೆ: ಹೊಸ ಮಾದರಿಗೆ ಮುನ್ನುಡಿ

banakkal
23/07/2025

ಚಿಕ್ಕಮಗಳೂರು: ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಹೆಸರಿಗೆ ಇಲ್ಲೊಂದು ಪ್ರೌಢ ಶಾಲೆ ಮಂಗಳ ಹಾಡಿದ್ದು, ಕಾಫಿನಾಡಲ್ಲಿ ಹೊಸ ಮಾದರಿಯ ತರಗತಿಗಳ ಆರಂಭಕ್ಕೆ ಮುನ್ನುಡಿ ಬರೆಯಲಾಗಿದೆ.

ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢ ಶಾಲೆಯಲ್ಲಿ  ವೃತ್ತಾಕಾರದಲ್ಲಿ ತರಗತಿಗಳನ್ನ ಪ್ರಾಯೋಗಿಕವಾಗಿ ಆರಂಭ ಮಾಡಲಾಗಿದೆ.

ಬಣಕಲ್ ಪ್ರೌಢ ಶಾಲೆಯಲ್ಲಿ  ಆರಂಭಿಕವಾಗಿ 8ನೇ ತರಗತಿಗೆ ಸೆಮಿ ಸರ್ಕಲ್ ತರಗತಿಗಳ ಆರಂಭವಾಗಿದೆ.  ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಮೂಡಿಸಲು ಲಾಸ್ಟ್ ಬೆಂಚ್ ಟು ಫಸ್ಟ್ ಬೆಂಚ್ ಮಾದರಿಯನ್ನು ಪರಿಚಯಿಸಲಾಗಿದೆ.

ಶಿಕ್ಷಕರು ಎಲ್ಲಾ ಮಕ್ಕಳ ಮೇಲೂ ಗಮನ ಹರಿಸಲು ಈ ಮಾದರಿ ಉಪಯುಕ್ತ ಎಂಬ ಕಾರಣಕ್ಕೆ ಈ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ.  ಮಕ್ಕಳು ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗಿಯಾಗಿ ಚರ್ಚೆ–ಗ್ರಹಿಕೆಗೆ ಈ ಮಾದರಿ ಅನುಕೂಲವಾಗಿದೆ.  ಹೊಸ ಪರಿಕಲ್ಪನೆಯ ತರಗತಿಗೆ ಪೋಷಕರು–ಮಕ್ಕಳಲ್ಲು ಹುಮ್ಮಸ್ಸು ಸೃಷ್ಟಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version