ಈ ಬಾರಿಯೂ ವರಿಷ್ಠರು ಪ್ರಯೋಗ ಮಾಡಬಹುದು: ಪ್ರತಾಪ್ ಸಿಂಹ ಟಿಕೆಟ್ ವಿಚಾರಕ್ಕೆ ಆರ್.ಅಶೋಕ್ ಪ್ರತಿಕ್ರಿಯೆ

ಮೈಸೂರು: ಸಂಸದ ಪ್ರತಾಪ್ ಸಿಂಹ ಟಿಕೆಟ್ ಕಳೆದುಕೊಳ್ಳಲಿದ್ದಾರೆಯೇ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಪ್ರತೀ ಚುನಾವಣೆಯಲ್ಲೂ ವರಿಷ್ಠರು ಪ್ರಯೋಗ ಮಾಡ್ತಾರೆ. ಈ ಚುನಾವಣೆಯಲ್ಲೂ ವರಿಷ್ಠರು ಪ್ರಯೋಗ ಮಾಡಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದ 28 ಕ್ಷೇತ್ರಗಳಲ್ಲೂ ಸರ್ವೇ ಆಗಿದೆ. ಸರ್ವೇ ನೋಡಿ ಹೊಸ ಅಭ್ಯರ್ಥಿಗಳನ್ನು ಹಾಕ್ತಾರೆ. ಅಂತಿಮವಾಗಿ ಸಿಇಸಿ ಸಭೆಯಲ್ಲಿ ತೀರ್ಮಾನ ಆಗಲಿದೆ ಎಂದು ಅವರು ಹೇಳಿದ್ದಾರೆ.
ಸಂಸದರ ಕಾರ್ಯವೈಖರಿಯನ್ನು ಹೈಕಮಾಂಡ್ ಪರಿಶೀಲಿಸ್ತಿದ್ದಾರೆ ಎಂದು ಆರ್.ಅಶೋಕ್ ಹೇಳಿದ್ದು, ಈ ಬಾರಿಯೂ ಪ್ರಯೋಗ ಮಾಡಬಹುದು, ನಮಗೆ ಅದರ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಟಿಕೆಟ್ ಗೆ ಗ್ಯಾರೆಂಟಿ ಇಲ್ಲವೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ. ಈಗಾಗಲೇ ವಿವಾದಿತ ನಾಯಕರನ್ನು ಬದಿಗಿಟ್ಟು ಬಿಜೆಪಿ ಹೊಸಬರಿಗೆ ಕೆಲವೆಡೆಗಳಲ್ಲಿ ಟಿಕೆಟ್ ನೀಡಿರುವುದು ಕಾಣಬಹುದಾಗಿದೆ.
ಅಂತೆಯೇ ಆರ್.ಅಶೋಕ್ ಅವರು ಹೇಳಿದಂತೆ, ಕರ್ನಾಟಕದಲ್ಲಿ ಪ್ರಯೋಗಕ್ಕೊಳಗಾಗುವ ಹಾಲಿ ಸಂಸದರ ಪೈಕಿ ಸಂಸದ ಪ್ರತಾಪ್ ಸಿಂಹ ಕೂಡ ಸೇರಿದ್ದಾರೆ ಎನ್ನುವ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth