12:50 AM Saturday 23 - August 2025

ಸರಣಿ ಅಪಘಾತ: ಬೈಕ್ ಸವಾರ ಮೃತ್ಯು, ಇಬ್ಬರಿಗೆ ಗಾಯ

ravi poojary
17/10/2023

ಕೋಟ: ಒಂದು ಕಾರು ಹಾಗೂ ಮೂರು ಬೈಕ್ಗಳ ಮಧ್ಯೆ ಕೋಡಿ ಕನ್ಯಾನದ ಅಂಗನವಾಡಿ ಶಾಲೆಯ ಬಳಿ ಅ.15ರಂದು ರಾತ್ರಿ ವೇಳೆ ಸಂಭವಿಸಿದ ಸರಣಿ ಅಪಘಾತದಲ್ಲಿ ಸವಾರೊಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದೆ.

ಮೃತರನ್ನು ಬೈಕ್ ಸವಾರ ರವಿ ಪೂಜಾರಿ ಎಂದು ಗುರುತಿಸಲಾಗಿದೆ. ಇನ್ನೆರೆಡು ಬೈಕ್ಗಳ ಸವಾರರಾದ ಪ್ರಶಾಂತ್ ಹಾಗೂ ಚರಣ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಡಿಕನ್ಯಾನ ಕಡೆಯಿಂದ ಪಡುಕೆರೆ ಕಡೆಗೆ ಹೋಗುತ್ತಿದ್ದ ಪ್ರಶಾಂತ್ ಬೈಕ್, ಕೋಡಿಕನ್ಯಾನ ಕಡೆಗೆ ಮುಖಮಾಡಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು ಒಮ್ಮೇಲೆ ಬಲಕ್ಕೆ ಚಲಾಯಿಸಿ ಹಿಂದಿನಿಂದ ಬರುತ್ತಿದ್ದ ರವಿ ಪೂಜಾರಿಯ ಬೈಕ್ಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಬಳಿಕ ರವಿ ಪೂಜಾರಿ ಚಲಾಯಿಸುತ್ತಿದ್ದ ಬೈಕ್ ಎದುರಿನಿಂದ ಬರುತ್ತಿದ್ದ ಚರಣ್ ಅವರ ಬೈಕಿಗೆ ಡಿಕ್ಕಿ ಹೊಡೆಯಿತು. ಇದರಿಂದ ಮೂರು ಬೈಕ್ಗಳು ರಸ್ತೆ ಎಸೆಯಲ್ಪಟ್ಟು, ಮೂವರು ಸವಾರರು ತೀವ್ರವಾಗಿ ಗಾಯಗೊಂಡರು. ಇವರ ಪೈಕಿ ಗಂಭೀರವಾಗಿ ಗಾಯಗೊಂಡ ರವಿ ಪೂಜಾರಿ, ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

Exit mobile version