2:05 AM Wednesday 27 - August 2025

ಗಣೇಶ ವಿಸರ್ಜನೆ ವೇಳೆ ಮಹಿಳೆಗೆ ಲೈಂಗಿಕ ಕಿರುಕುಳ: ಬಿಜೆಪಿ ಮುಖಂಡನ ವಿರುದ್ಧ ಎಫ್ ಐಆರ್

ts raju
09/09/2024

ರಾಮನಗರ: ಚನ್ನಪಟ್ಟಣದ ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಎಸ್.ರಾಜು ಮೇಲೆ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದ್ದು, ಮಹಿಳೆಯೊಬ್ಬರು ಅಕ್ಕೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

2 ದಿನದ ಹಿಂದೆ ಗಣೇಶ ವಿಸರ್ಜನೆ ವೇಳೆ ರಾಜು ನನ್ನ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದು, ನನ್ನ ಮನೆ ಮುಂದೆಯೇ ನನ್ನ ಫೋಟೋ ತೆಗೆದು ರೇಗಿಸಿ ಕಿರುಕುಳ ನೀಡಿದ್ದಾನೆ ಅಂತ ದೂರಿನಲ್ಲಿ ಹೇಳಲಾಗಿದೆ.

ಗಣೇಶ ಮೂರ್ತಿ ಮೆರವಣಿಗೆ ದಿನ ರಾತ್ರಿ 11:30ರ ಸಮಯದಲ್ಲಿ ಮನೆಯ ಎದುರು ರಸ್ತೆಯಲ್ಲಿ ನಿಂತಿದ್ದ ವೇಳೆ  ಆರೋಪಿ ಬಂದು, ಯಾವಗ ಬಂದೆ ಬೇಬಿ ಎಂದು ಪ್ರಶ್ನಿಸಿ, ಹೆಗಲ ಮೇಲೆ ಕೈ ಹಾಕಿ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದು, ಬಳಿಕ ಮಹಿಳೆಯ ಫೋಟೋ ತೆಗೆದು ಬೇರೆಯವರಿಗೂ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೂಡ ಕರೆ ಮಾಡಿ, ಕಾಫಿ ಡೇ ಗೆ ಹೋಗೋಣ ಅಂತ ಕರೆದು ಕಿರುಕುಳ ನೀಡಿದ್ದು, ಹಲವು ಬಾರಿ ಮೈಕೈ ಮುಟ್ಟಿ ಮಹಿಳೆಯ ಗೌರವಕ್ಕೆ ಚ್ಯುತಿ ತಂದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಸಂದರ್ಭದಲ್ಲೇ ತಾಲೂಕು ಅಧ್ಯಕ್ಷನ ವಿರುದ್ಧ ಇಂತಹದ್ದೊಂದು ಆರೋಪ ಕೇಳಿ ಬಂದಿರುವುದು ಬಿಜೆಪಿಗೆ ಮುಜುಗರ ಸೃಷ್ಟಿಸಿದೆ. ವರದಿಗಳ ಪ್ರಕಾರ ಆರೋಪಿಯು ಬಿಜೆಪಿ ಎಂಎಲ್​​ ಸಿ ಸಿ.ಪಿ ಯೋಗೇಶ್ವರ್ ಗೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂದು ಹೇಳಲಾಗಿದೆ.

ಬಿಜೆಪಿಯಿಂದ ಅಮಾನತು

ಚನ್ನಪಟ್ಟಣ ಬಿಜೆಪಿ ತಾಲೂಕು ಅಧ್ಯಕ್ಷನ ವಿರುದ್ಧ FIR ದಾಖಲಾಗುತ್ತಿದ್ದಂತೆಯೇ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಟಿ.ಎಸ್.ರಾಜುನನ್ನು ಅಮಾನತು ಮಾಡಿ ಕ್ರಮಕೈಗೊಂಡಿದ್ದಾರೆ.

ಸದ್ಯ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ರಾಜು ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version