ರಸ್ತೆ ಬದಿಯಲ್ಲಿ ಸಿಕ್ಕಿದ ಬೆಲೆಬಾಳುವ ಮೊಬೈಲ್ ಫೋನ್ ನ್ನು ಪೊಲೀಸರಿಗೆ ಒಪ್ಪಿಸಿದ ಶಶಿ ಬಲ್ಕೂರು

shashi balkuru
05/03/2024

ಕುಂದಾಪುರ: ರಸ್ತೆ ಬದಿಯಲ್ಲಿ ಸಿಕ್ಕಿದ ಬೆಲೆಬಾಳುವ ಮೊಬೈಲ್ ಫೋನನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಸಮನ್ವಯ ಸಮಿತಿ ಕುಂದಾಪುರ ತಾಲೂಕು ಪತ್ರಿಕಾ ಕಾರ್ಯದರ್ಶಿ ಶಶಿ ಬಲ್ಕೂರು ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಸೋಮವಾರ ಮಧ್ಯಾಹ್ನ ಸುಮಾರು ನಾಲ್ಕು ಗಂಟೆ ಹೊತ್ತಿಗೆ ನಾನು ಕುಂದಾಪುರದಿಂದ ಶಶಿ ಬಲ್ಕೂರು ಅವರು ಮನೆಗೆ ತೆರಳುತ್ತಿದ್ದ ವೇಳೆ ಕುಂದಾಪುರ ಸಂಗಮ್ ಜಂಕ್ಷನ್ ಹತ್ತಿರ ಒಂದು ಬೆಲೆ ಬಾಳುವ ಮೊಬೈಲ್ ಫೋನ್  ಅವರಿಗೆ ಸಿಕ್ಕಿದೆ.

ಆ ಮೊಬೈಲ್ ಫೋನ್ ನ್ನು ತೆಗೆದುಕೊಂಡು ಕುಂದಾಪುರ ಠಾಣೆಗೆ ತೆರಳಿದ ಅವರು,  ಸಬ್ ಇನ್ಸ್’ಪೆಕ್ಟರ್ ಅವರನ್ನು ಭೇಟಿ ಮಾಡಿ, ಮೊಬೈಲ್ ನ್ನು ಅವರ ವಶಕ್ಕೆ ನೀಡಿದ್ದಾರಲ್ಲದೇ, ಮೊಬೈಲ್ ಕಳೆದುಕೊಂಡವರಿಗೆ ಅದನ್ನು ಹಿಂದಿರುಗಿರುವಂತೆ ಮನವಿ ಮಾಡಿಕೊಂಡರು.

ಯಾರಾದರೂ ಮೊಬೈಲ್ ಕಳೆದುಕೊಂಡಿದ್ದರೆ, ಕುಂದಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪಡೆದುಕೊಳ್ಳಿ ಎಂದು ಶಶಿ ಬಲ್ಕೂರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version