8:35 AM Wednesday 27 - August 2025

ಬೆಂಗಳೂರಿಗೆ ಬಂದಿದ್ದು ಮೇಕೆ ಮಾಂಸವೋ, ನಾಯಿ ಮಾಂಸವೋ: ಇಲ್ಲಿದೆ ಹೊಸ ತಿರುವು!

bangalore news
28/07/2024

ಬೆಂಗಳೂರು: ರಾಜಸ್ತಾನದಿಂದ ಬಂದ ಮೇಕೆ ಮಾಂಸ ಇದೀಗ ರಾಜ್ಯದಲ್ಲಿ ಹೊಸ ಗೊಂದಲವನ್ನು ಸೃಷ್ಟಿ ಮಾಡಿದೆ. ಇದು ಮೇಕೆಯ ಮಾಂಸವೇ ಅಥವಾ ನಾಯಿಯ ಮಾಂಸವೇ ಎನ್ನುವ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

ಪುನೀತ್ ಕೆರೆಹಳ್ಳಿ ಆ್ಯಂಡ್ ಟೀಮ್ ಇದು ಮೇಕೆ, ಕುರಿ ಮಾಂಸ ಅಲ್ಲ ನಾಯಿಯ ಮಾಂಸ ಎಂದು ಗೊಂದಲ ಸೃಷ್ಟಿಸಿದ್ದರು. ಮುಸ್ಲಿಂ ಮುಖಂಡ ಅಬ್ದುಲ್‌ ರಜಾಕ್‌ ಈ ಬಗ್ಗೆ ಪ್ರತಿಕ್ರಿಯಿಸಿ ಪುನೀತ್ ಕೆರೆ ಹಳ್ಳಿ ಮತ್ತಿತರರು ರೋಲ್ ಕಾಲ್ ಕಲೆಕ್ಷನ್ ಮಾಡಲು ಮುಂದಾಗಿದ್ದರು. ಈ ವೇಳೆ ಹಣ ಕೊಡದೇ ಇದ್ದ ಕಾರಣ ಮೇಕೆ ಮಾಂಸವನ್ನು ನಾಯಿ ಮಾಂಸ ಎಂದು ಸುಳ್ಳು ವದಂತಿ ಹಬ್ಬಿಸಿದ್ದರು ಎಂದು ಹೇಳಿದ್ದರು. ಅಲ್ಲದೇ ಮುಸ್ಲಿಮರಾದ ನಾವು ನಾಯಿಯನ್ನು ಮುಟ್ಟಿಸಿಕೊಳ್ಳುವುದೂ ಇಲ್ಲ, ಅಂತಹದ್ರಲ್ಲಿ ನಾಯಿಮಾಂಸವನ್ನು ಪೂರೈಸುತ್ತೇವಾ ಎಂದು ಪ್ರಶ್ನಿಸಿದ್ದರು.

ಬಾಕ್ಸ್ ನಲ್ಲಿದ್ದದ್ದು ಮೇಕೆನಾ? ನಾಯಿನಾ?

ವರದಿಗಳ ಪ್ರಕಾರ, ರಾಜಸ್ಥಾನದ ಶಿರೋಹಿ ಮೇಕೆ ಮಾಂಸ ಬಾಕ್ಸ್ ನಲ್ಲಿತ್ತು ಎಂದು ಹೇಳಲಾಗುತ್ತಿದೆ. ಶಿರೋಹಿ ಮೇಕೆಗಳ ದೇಹ ರಚನೆ ಚರ್ಮವಿಲ್ಲದ್ದಾಗ ನಾಯಿ ದೇಹದ ಆಕಾರಕ್ಕೆ ಹೋಲಿಕೆಯಾಗುತ್ತದೆ. ಇದರಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ.

ಇನ್ನೂ ಆಹಾರ ಇಲಾಖೆಯವರು ಕೂಡ  ಇದು ಮೇಲ್ನೋಟಕ್ಕೆ ನಾಯಿಯಲ್ಲ ಎಂದಿದ್ದರು. ಆದರೆ, ಪುನೀತ್ ಕೆರೆಹಳ್ಳಿ ಟೀಮ್ ಸೃಷ್ಟಿಸಿದ ಗೊಂದಲದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದು ನಾಯಿ ಮಾಂಸ ಎಂದೇ ಪ್ರತಿಪಾದಿಸುವ ಪೋಸ್ಟರ್ ಗಳು ವ್ಯಾಪಕವಾಗಿ ಹರಿದಾಡುತ್ತಿದೆ. ಇದರಿಂದಾಗಿ ಮಟನ್ ಪ್ರಿಯರು ಬೆಂಗಳೂರಿನ ಮಟನ್ ಹೊಟೇಲ್ ಗಳಲ್ಲಿ ಊಟ ಮಾಡಲು ಹಿಂಜರಿಯುವ ಸನ್ನಿವೇಶ ಸೃಷ್ಟಿಯಾಗಿದೆ.

ರಾಜಸ್ಥಾನದಲ್ಲಿ ಶಿರೋಗಿ ಮೇಕೆಯನ್ನು ಹೆಚ್ಚಾಗಿ ಸಾಕುತ್ತಾರೆ. ಈ ಮೇಕೆಗಳ ದೇಹ ರಚನೆ ಹೇಗಿದೆ ಅಂದ್ರೆ, ಬಾಲ ಸ್ವಲ್ಪ ಉದ್ದ ಮತ್ತು ದಪ್ಪ ಇರುತ್ತದೆ. ನೋಡಲು ಸ್ವಲ್ಪ ನಾಯಿಯಂತೆ ಕಾಣುತ್ತದೆ. ಮರುಭೂಮಿಯಲ್ಲಿ ಕುರುಚಲು ಗಿಡ, ಸಣ್ಣಮರಗಳ ಎಲೆಗಳ ತಿಂದು ಈ ಮೇಕೆಗಳು ಬದುಕುತ್ತವೆಯಂತೆ!

ಮಟನ್ ಸ್ಟಾಲ್,  ಹೊಟೇಲ್ ಗಳಿಗೆ ಆತಂಕ:

ಪುನೀತ್ ಕೆರೆಹಳ್ಳಿ ಹಾಗೂ ತಂಡ, ಮೇಕೆ ಮಾಂಸವನ್ನು ನಾಯಿ ಮಾಂಸ ಎಂದು ಅಪಪ್ರಚಾರ ನಡೆಸಿರುವುದರಿಂದ ಮಟನ್ ಸ್ಟಾಲ್ ಹಾಗೂ ಮಟನ್ ಹೊಟೇಲ್ ಗಳಿಗೆ ಆತಂಕಸೃಷ್ಟಿಯಾಗಿದೆ. ಮಟನ್ ಹೊಟೇಲ್ ಗಳಿಗೆ  ಸ್ಟಾಲ್ ಗಳಿಗೆ ಜನ ಹೋಗಲು ಹಿಂದೆ ಮುಂದೆ ನೋಡುವಂತಾಗಿದೆ. ಇದರಿಂದ ವ್ಯಾಪಾರಿಗಳಿಗೆ ನಷ್ಟವಾಗುವ ಸಾಧ್ಯತೆಗಳು ಕಂಡು ಬಂದಿವೆ. ಪುನೀತ್ ಕೆರೆಹಳ್ಳಿ ಹಾಗೂ ತಂಡದ ಆರೋಪ ಸುಳ್ಳು ಹಾಗೂ ದುರುದ್ದೇಶದಿಂದ ಕೂಡಿದ್ದರೆ, ಅವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version