ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ ಮಹಿಳೆಯ ಮನೆಗೆ ಹೋದ ವ್ಯಕ್ತಿಗೆ ಶಾಕ್!

ಬೆಂಗಳೂರು: ಮಹಿಳೆಯೊಬ್ಬರು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದು, ಮಹಿಳೆಯ ಆಹ್ವಾನವನ್ನು ನಂಬಿ ಆಕೆಯ ಮನೆಗೆ ಹೋದ ವ್ಯಕ್ತಿಗೆ ಭಾರೀ ಶಾಕ್ ಎದುರಾಗಿದೆ.
ಬೆಂಗಳೂರಿನ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವೈಟ್ ಫೀಲ್ಡ್ ನಿವಾಸಿಯೋರ್ವನಿಗೆ ಮೆಹರಾ ಎಂಬ ಹೆಸರಿನಲ್ಲಿ ಡೇಟಿಂಗ್ ಆ್ಯಪ್ ನಲ್ಲಿ ಮಹಿಳೆಯೊಬ್ಬರ ಪರಿಚಯವಾಗಿದೆ.
ನನ್ನ ಗಂಡ ದುಬೈನಲ್ಲಿದ್ದಾನೆ, ಲೈಂಗಿಕವಾಗಿ ತನ್ನನ್ನು ತೃಪ್ತಿಪಡಿಸುವಂತೆ, ತನ್ನ ಜೆ.ಪಿ.ನಗರದ 5ನೇ ಹಂತದ ಮನೆಗೆ ಬರುವಂತೆ ಲೊಕೇಶನ್ ಕಳಿಸಿ ಮಹಿಳೆ ಆಹ್ವಾನಿಸಿದ್ದಾಳೆ.
ಮಹಿಳೆ ಕರೆದ ಸಂತೋಷದಲ್ಲಿ ಬೇರೇನು ಯೋಚನೆ ಮಾಡದ ವ್ಯಕ್ತಿ, ಮಹಿಳೆಯ ಮನೆಗೆ ತೆರಳಿದ್ದಾನೆ. ಈ ವೇಳೆ ಏಕಾಏಕಿ ಮೂವರು ಅಪರಿಚಿತರು ಆಕೆಯ ಮನೆಗೆ ಆಗಮಿಸಿದ್ದು, ಬೆಡ್ ರೂಮ್ ನಲ್ಲಿ ಆತನನ್ನು ಕೂಡಿ ಹಾಕಿ ಥಳಿಸಿದ್ದಲ್ಲದೇ, ನಿನ್ನನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಓಡಿಸುತ್ತೇವೆ, ಮುಂಜಿ ಮಾಡಿಸಿ ಮದುವೆ ಮಾಡತ್ತೇವೆ ಎಂದು ಬೆದರಿಸಿದ್ದಲ್ಲದೇ 3 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ.
ಇದರಿಂದ ಭಯಗೊಂಡ ಸಂತ್ರಸ್ತ ವ್ಯಕ್ತಿ ಕೊನೆಗೆ ತನ್ನ ಅಕೌಂಟ್ ನಲ್ಲಿದ್ದ 21 ಸಾವಿರ ರೂಪಾಯಿಯನ್ನು ಅವರಿಗೆ ಫೋನ್ ಪೇ ಮಾಡಿದ್ದು, ಈ ವೇಳೆ ಆರೋಪಿಗಳು ವ್ಯಕ್ತಿಯನ್ನು ಬಿಟ್ಟು ಕಳಿಸಿದ್ದಾರೆ.
ಘಟನೆ ಸಂಬಂಧ ಇದೀಗ ಮೋಸ ಹೋದ ವ್ಯಕ್ತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw