ಮಲ್ಯ ವಿಸ್ಕಿ ಪ್ರಮೋಟ್ ಮಾಡಲು ಸಿಎಂ–ಡಿಸಿಎಂ ರೇಸ್ ಗೆ ಬೀಳಬೇಕಿತ್ತಾ?: ಸಿ.ಟಿ.ರವಿ ಪ್ರಶ್ನೆ

c t ravi
09/06/2025

ಚಿಕ್ಕಮಗಳೂರು : ಸಿಎಂ ನಾನು ವಿಧಾನಸೌಧದ ಮೆಟ್ಟಲಿಗೆ ಮಾತ್ರ ಸಿಎಂ ಎಂದು ಭಾವಿಸಿದ್ದಾರೆ, ನಾನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಿಳಿದಿದ್ದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಆರ್ ಸಿಬಿ ವಿಜಯೋತ್ಸವದ ವೇಳೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ನಮ್ಮ ಜವಾಬ್ದಾರಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ನಿಯೋಜಿಸಿದ್ದು ಅಂತಾರೆ, ಹಾಗಾದ್ರೆ, ರಾಜ್ಯದ ಬೇರೆ ಕಡೆ ಸತ್ತರೆ ಸಿಎಂ ಹಾಗೂ ಕಾಂಗ್ರೆಸ್ಸಿಗೆ ಜವಾಬ್ದಾರಿ ಇಲ್ವಾ ಎಂದು ಅವರು ಪ್ರಶ್ನಿಸಿದರು.

ನೀವು ಎರಡು ಕಡೆ ಕಾರ್ಯಕ್ರಮ ಆಯೋಜಿಸಿದ ಕಾರಣ ಪೊಲೀಸರು ಭದ್ರತೆ ನೀಡಲು ಆಗಲಿಲ್ಲ. ಪೊಲೀಸರು ನಿಮ್ಮ ಮಕ್ಕಳು ಮೊಮ್ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಿದರು, ಜನಸಾಮಾನ್ಯರು ಸತ್ತರು ಎಂದು ಅವರು ಆರೋಪಿಸಿದರು.

ಜನಸಾಮಾನ್ಯರು ಸತ್ತರು ಎಂದರೆ ನಿಮ್ಮ ಆತ್ಮಸಾಕ್ಷಿಗೆ ಚುಚ್ಚಬೇಕಿತ್ತಲ್ವಾ?  ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏನಾಯ್ತು ನನಗೆ ಗೊತ್ತಿಲ್ಲ, ನಾನು ವಿಧಾನಸೌಧದ ಮೆಟ್ಟಲಿಗೆ ಮಾತ್ರ ಸಿಎಂ ಅಂತ ಹೇಳಲಿ,  ರಾಜ್ಯಪಾಲರನ್ನ ಕರೆಸಿದ್ದು ಯಾರು, ಡಿಪಿಆರ್ ಅವರಿಗೆ ಲೆಟರ್ ಕೊಟ್ಟವರು ಯಾರು…? ಎಂದು ಸಿ.ಟಿ.ರವಿ ಪ್ರಶ್ನಿಸಿದರು.

ನಿಮಗೆ ಇನ್ನೊಂದು ಮಜಾ ಗೊತ್ತಾ…ಒಳಮರ್ಮ ಬೇರೇನೆ ಇದೆ, ಪ್ರಕರಣ ನಡೆದ ಬಳಿಕ 4 ನೇ ತಾರೀಖಿನ ಲೆಟರ್ ಗೆ 5ನೇ ತಾರೀಖು ಸಹಿ ಹಾಕಿಸಿಕೊಂಡಿದ್ದಾರೆ.  ಕಾಲ್ತುಳಿದ ಘಟನೆಗಳು ಆದ ಮೇಲೆ ದಾಖಲೆ ನಿರ್ಮಿಸಲು ಇಲಾಖೆಗಳ ಸೀಲ್ ಹಾಗೂ ಸಹಿ ಹಾಕಿಸಿಕೊಂಡಿದ್ದಾರೆ. ಅದಕ್ಕೆ ರಾಜ್ಯದ ಉಚ್ಛ ನ್ಯಾಯಾಲಯದ ನೇತೃತ್ವದಲ್ಲಿ ಸ್ವತಂತ್ರ ತನಿಖೆಯಾಗಲಿ, ವರದಿಯನ್ನ ಅವರಿಗೆ ನೀಡಬೇಕು ಎಂದರು.

ವಿಸ್ಕಿ ಪ್ರಮೋಟ್ ಮಾಡಲು ಆರ್.ಸಿ.ಬಿ. ಹೆಸರಿಟ್ಟೆ ಅಂತ ಮಲ್ಯ ಹೇಳಿದ್ದಾರೆ. ಮಲ್ಯ ವಿಸ್ಕಿ ಪ್ರಮೋಟ್ ಮಾಡಲು ಸಿಎಂ–ಡಿಸಿಎಂ ರೇಸ್ ಗೆ ಬೀಳಬೇಕಿತ್ತಾ? 3.50: 4 ಗಂಟೆಗೆ ಪಕ್ಷದ ಕಚೇರಿಯಲ್ಲಿದ್ದ ನನಗೆ 3 ಜನ ಸಾವು ಅಂತ ನನಗೆ ಮಾಹಿತಿ ಬಂತು.  ಸಿಎಂಗೆ ಮಾಹಿತಿ ಇರಲ್ವಾ… ನಾನು ಸಾಮಾನ್ಯ ಎಂ.ಎಲ್.ಸಿ. ನನಗೆ ಮಾಹಿತಿ ಬಂತು, ಸಿಎಂಗೆ ಬರಲ್ವಾ? ಎಂದು ಅವರು ಪ್ರಶ್ನಿಸಿದರು.

ಡಿಸಿಎಂ ಕಪ್ ಗೆ ಮುತ್ತಿಡಲು ಹೋಗ್ತಾರೆ…‌ಸಿಎಂ ದೋಸೆ ತಿನ್ನೋಕೆ  ಹೋಗ್ತಾರೆ ಮನುಷ್ಯತ್ವ, ಮಾನವೀಯತೆ ಎಲ್ಲಿದೆ.  ಬೆಂಗಳೂರಿನ ಕಾಲ್ತುಳಿತ ಪ್ರಕರಣ ಕ್ರಿಮಿನಲ್ ನೆಗ್ಲಿಜನ್ಸಿ, ಪೆಹಲ್ಗಾಮ್ ನಲ್ಲಿ ಆಗಿದ್ದು ಭಯೋತ್ಪಾದಕರ ದಾಳಿ ಎಂದರು.

ಉಗ್ರರ ದಾಳಿಗೆ ಪ್ರತಿಕಾರ ಮಾಡಿದ್ದೇವೆ, ಆಪರೇಷನ್ ಸಿಂಧೂರ ಹೆಸರಲ್ಲಿ ನುಗ್ಗಿ ಹೊಡೆದಿದ್ದೇವೆ. ಇಲ್ಲಿ ಯಾರಿಗೆ ನುಗ್ಗಿ ಹೊಡೀಬೇಕು ಜನ, ನಿರ್ಲಕ್ಷ್ಯ ಮಾಡಿದವರಿಗೋ… ಆಯೋಜನೆ ಮಾಡಿದವರಿಗೋ… ನೀವು ಹೇಳಿ ನಮಗೆ ಆಳುವ ಯೋಗ್ಯತೆ ಇಲ್ಲ, ನುಗ್ಗಿ ಹೊಡೀಬೇಕು ಅಂದ್ರೆ ಜನ ಅದನ್ನೂ ಮಾಡ್ತಾರೆ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version