ಶ್ರದ್ಧಾ ಹತ್ಯೆ ಪ್ರಕರಣ: ತಲೆ ಬುರುಡೆಯ ಭಾಗ, ಹರಿತವಾದ ಆಯುಧ ಪತ್ತೆ

shraddha walker
20/11/2022

ನವದೆಹಲಿ: ಶ್ರದ್ಧಾ ವಾಲಕರ್ ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಾನವ ತಲೆಬುರುಡೆಯ ಕೆಳದವಡೆ ಹಾಗೂ ಮತ್ತಷ್ಟು ಮೂಳೆಗಳನ್ನು ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಪತ್ತೆಯಾಗಿರುವ ಮೂಳೆಗಳು ಶ್ರದ್ಧಾ ಅವರದ್ದೇ ಎಂದು ಖಚಿತ ಪಡಿಸಿಕೊಳ್ಳಲು ಆಕೆಯ ತಂದೆಯ ಡಿಎನ್ ಎ ಮಾದರಿ ದೃಢೀಕರಿಸಲು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಛತ್ತರ್‌ಪುರದ ಅರಣ್ಯ ಪ್ರದೇಶ ಸೇರಿದಂತೆ, ಆಫ್ತಾಬ್ ಅಮೀನ್ ಪೂನಾವಾಲಾ ಮತ್ತು ಶ್ರದ್ಧಾ ವಾಸಿಸುತ್ತಿದ್ದ ಸ್ಥಳ ಹಾಗೂ ದೆಹಲಿ ನಗರದಲ್ಲಿ ದೆಹಲಿ ಪೊಲೀಸರು ಮತ್ತೊಮ್ಮೆ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.

ಆಫ್ತಾಬ್‌ ನ ಛತ್ತರ್‌ಪುರ ಫ್ಲ್ಯಾಟ್‌ನಿಂದ ಶನಿವಾರ ಪೊಲೀಸರು ದೊಡ್ಡದಾದ, ಹರಿತವಾದ ಕತ್ತರಿಸುವ ಉಪಕರಣವೊಂದನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಆರೋಪಿಯು ಶ್ರದ್ಧಾಳ ದೇಹ ಕತ್ತರಿಸಲು ಬಳಸಿರಬಹುದು ಎಂದು ಶಂಕಿಸಲಾಗಿದೆ.

ಶ್ರದ್ಧಾಳನ್ನು ಹತ್ಯೆ ಮಾಡಿದ ಬಳಿಕ ಆರೋಪಿಯು ಎಲ್ಲ ಸಾಕ್ಷ್ಯಗಳನ್ನು ನಾಶಪಡಿಸಿದ್ದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಶ್ರದ್ಧಾಳ ರಕ್ತದ ಬಟ್ಟೆಗಳನ್ನು ಕಸದ ವ್ಯಾನ್‌ಗೆ ವಿಲೇವಾರಿ ಮಾಡಿದ್ದಾಗಿಯೂ ಆರೋಪಿ ಮಾಹಿತಿ ನೀಡಿದ್ದಾನೆ. ‌

ಇನ್ನೂ, , ಶ್ರದ್ಧಾಳ ತಲೆಬುರುಡೆಯನ್ನು ದೆಹಲಿಯ ಮೆಹ್ರೌಲಿ ಕೆರೆಗೆ ಎಸೆದಿರುವುದಾಗಿ ಆಫ್ತಾಬ್ ಪೊಲೀಸರಿಗೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಭಾನುವಾರ ದೆಹಲಿ ಮಹಾನಗರ ಪಾಲಿಕೆಯ ಸಿಬ್ಬಂದಿ ಹಾಗೂ ಪೊಲೀಸರು ಮೆಹ್ರೌಲಿ ಕೆರೆಯನ್ನು ಖಾಲಿ ಮಾಡುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version