ವಿಪಕ್ಷಗಳ ಮುಖಂಡರ ಮೇಲೆ ಇನ್ನು ಕರುಣೆ ತೋರಿಸಲ್ಲ: ಸಿದ್ದರಾಮಯ್ಯ ಕೆಂಡಾಮಂಡಲ

c.m sidaramaya
11/08/2024

ಮೈಸೂರು: ನಾನು ಮೊದಲಿನ ಸಿದ್ದರಾಮಯ್ಯ ಅಲ್ಲ, ಬದಲಾಗುತ್ತೇನೆ ಇನ್ನು ಮುಂದೆ ವಿಪಕ್ಷಗಳ ಯಾವ ಮುಖಂಡರ ಮೇಲೂ ಕರುಣೆ ತೋರಿಸಲ್ಲ ಅಂತ ಸಿಎಂ ಸಿದ್ದರಾಮಯ್ಯ ಬಿಜೆಪಿ—ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲರ ಬಗ್ಗೆ ಹೋಗ್ಲಿ ಬಿಡು ಅಂತಿದ್ದೆ. ಅದೇ ನನಗೆ ಮುಳುವಾಗಿದೆ. ವಿಪಕ್ಷಗಳ ಎಲ್ಲ ನಾಯಕರ ಹಳೆಯ ಕಥೆ ಓಪನ್ ಮಾಡ್ತೀನಿ. ದ್ವೇಷ ರಾಜಕಾರಣ ಅಂದರೂ ಪರವಾಗಿಲ್ಲ, ನಾನು ಇನ್ನು ಮುಂದೆ ಡೋಂಟ್ ಕೇರ್ ಎಂದು ವಿಪಕ್ಷಗಳ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ.

ಬೀದಿ ಬೀದಿ ಸುತ್ತಿಕೊಂಡು ತಪ್ಪೇ ಮಾಡದ ನನ್ನ ಮೇಲೆ ಸುಳ್ಳು ಹಬ್ಬಿಸಿ, ಹೆಸರು ಕೆಡಿಸುತ್ತಿದ್ದಾರೆ. ನಾನಿನ್ನೂ ತಾಳ್ಮೆಯಾಗಿರಲ್ಲ ಯಾರೇ ಒತ್ತಡ ಹೇರಿದರೂ ವಿಪಕ್ಷಗಳ ವಿಚಾರದಲ್ಲಿ ತಾಳ್ಮೆಯಿಂದಿರುವುದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version