7:56 AM Saturday 31 - January 2026

ಸಿಡಿಲು ಬಡಿದು ಯುವಕನ ದಾರುಣ ಸಾವು

19/02/2021

ಬೆಂಗಳೂರು: ನಿನ್ನೆ ರಾಜ್ಯದ ಹಲವು ಕಡೆಗಳಲ್ಲಿ ಮಳೆ ಸುರಿದಿದ್ದು,  20 ವರ್ಷ ವಯಸ್ಸಿನ ಯುವಕ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ  ಬೆಳಗಾವಿಯ  ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ಇಟ್ಟಂಗಿ ಭಟ್ಟಿಯಲ್ಲಿ  ನಡೆದಿದೆ.

ಗುರುನಾಥ್ ನಾರ್ವೇಕ ಮೃತಪಟ್ಟ ಯುವಕನಾಗಿದ್ದು,  ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ  ಅಸು ಗ್ರಾಮದಿಂದ ಗುರುನಾಥ ಕೆಲಸಕ್ಕಾಗಿ ಕೆಲವು ದಿನಗಳ ಹಿಂದೆ ನಿಡಿಗಲ್ ಗೆ ಆಗಮಿಸಿದ್ದನೆನ್ನಲಾಗಿದ್ದು,  ನಿನ್ನೆ ರಾತ್ರಿ ಜೋರಾಗಿ ಮಳೆ ಸುರಿದಿದ್ದರಿಂದ ಇಟ್ಟಂಗಿ ಭಟ್ಟಿಗೆ ಪ್ಲಾಸ್ಟಿಕ್ ಹೊದಿಕೆ ಹಾಕುತ್ತಿದ್ದ. ಈ ವೇಳೆ ಏಕಾಏಕಿ  ಸಿಡಿಲು ಬಡಿದಿದ್ದು, ಗುರುನಾಥ ಮೃತಪಟ್ಟಿದ್ದಾರೆ.

ಬೆಳಗಾವಿಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ  ಸಿಡಿಲು ಬಡಿದು ಹೊತ್ತಿ ಉರಿದಿದೆ. ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆ ಮಧ್ಯಾಹ್ನ 3 ಗಂಟೆಗೆ ಆರಂಭಗೊಂಡ ಮಳೆ 4-5 ಗಂಟೆಗಳ ಕಾಲ ಧಾರಾಕಾರವಾಗಿ ಸುರಿದಿದೆ.

ನಿನ್ನೆ ರಾಜ್ಯಸ ವಿವಿಧೆಡೆಗಳಲ್ಲಿ ಮಳೆ ಸುರಿದಿದ್ದು, ಹಾವೇರಿ, ಕೊಪ್ಪಳ, ಗದಗ, ಬೆಳಗಾವಿ, ಮೈಸೂರು, ತುಮಕೂರು, ಮಂಡ್ಯ, ಚಿತ್ರದುರ್ಗ, ಧಾರವಾಡ ಸೇರಿದಂತೆ ಅನೇಕ ಸ್ಥಳಗಳಲ್ಲಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗಿನ ಜಾವ ಮಳೆಯಾಗಿದೆ.

ಇತ್ತೀಚಿನ ಸುದ್ದಿ

Exit mobile version