ಯೋಗಿ ಆದಿತ್ಯನಾಥ್ ಅವರ ವಿವಾಹ ಯೋಜನೆಯಲ್ಲಿ ಸಹೋದರನನ್ನೇ ಮದುವೆಯಾದ ಸಹೋದರಿ!
ಮಹಾರಾಜಗಂಜ್: ಉತ್ತರ ಪ್ರದೇಶ ಸರ್ಕಾರ ತಂದಿರುವ ಸಾಮೂಹಿಕ ವಿವಾಹ ಯೋಜನೆ, ದಿನಕ್ಕೊಂದು ವಿವಾದವನ್ನು ಸೃಷ್ಟಿಸುತ್ತಿದೆ. ಈ ಯೋಜನೆ ಜನರಿಗೆ ಸಹಾಯವಾಗಬೇಕಿತ್ತು. ಆದರೆ, ಮಧ್ಯವರ್ತಿಗಳ ಕಪಿಮುಷ್ಠಿಗೆ ಸಿಕ್ಕಿ, ಹಗರಣವಾಗಿ ಪರಿವರ್ತನೆಯಾಗಿದೆ.
ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿಯಲ್ಲಿ ಯೋಗಿ ಸರ್ಕಾರವು ಮಾರ್ಚ್ 5ರಂದು ಮಹಾರಾಜ್ ಗಂಜ್ ಜಿಲ್ಲೆಯ ಲಕ್ಷ್ಮೀಪುರ ಬ್ಲಾಕ್ ನಲ್ಲಿ 38 ಜೋಡಿಗಳಿಗೆ ವಿವಾಹ ನೆರವೇರಿಸಿದೆ. ವಿವಾಹ ಯೋಜನೆಯಡಿ ನವದಂಪತಿಗಳಿಗೆ 35 ಸಾವಿರ ರೂಪಾಯಿ ಹಣ ಹಾಗೂ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತಿದೆ. ಆದರೆ ಇದು ವ್ಯಾಪಕ ದುರ್ಬಳಕೆಯಾಗುತ್ತಿದೆ.
ಇತ್ತೀಚೆಗೆ ಯುವತಿಯೋರ್ವಗಳು ಯೋಗಿ ಆದಿತ್ಯನಾಥ ಅವರ ವಿವಾಹ ಯೋಜನೆಯಡಿ ತನ್ನ ಸಹೋದರನನ್ನೇ ವಿವಾಹವಾಗಿದ್ದು, ಇದು ಈ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಸಾಕ್ಷಿಯಂತಿದೆ.
ಯುವತಿಗೆ ಈಗಾಗಲೇ ವಿವಾಹವಾಗಿತ್ತು. ಆಕೆಯ ಪತಿ ಉದ್ಯೋಗದ ನಿಮಿತ್ತ ಬೇರೆ ಪ್ರದೇಶದಲ್ಲಿ ವಾಸವಾಗಿದ್ದಾನೆ. ಈ ನಡುವೆ ಮಧ್ಯವರ್ತಿಗಳು, ವಿವಾಹ ಸ್ಕೀಮ್ ನ ಪ್ರಯೋಜನ ಪಡೆಯಲು ಯುವತಿಯ ಮನವೊಲಿಸಿದ್ದಾರೆ. ಸಾಮೂಹಿಕ ಯೋಜನೆಯ ಹಣ ಪಡೆಯಲು ಫೋಟೋ ತೆಗೆದುಕೊಳ್ಳುವ ವೇಳೆ ವ್ಯಕ್ತಿಯೋರ್ವನನ್ನು ಬರಲು ಹೇಳಿದ್ದರು. ಆದರೆ ಆತ ಬಂದಿರಲಿಲ್ಲ. ಹೀಗಾಗಿ ಆ ಯುವತಿಯ ಸಹೋದರನನ್ನೇ ವರನ ಸ್ಥಾನದಲ್ಲಿ ಕೂರಿಸಿ ಮದುವೆ ಮಾಡಿಸಿದ್ದಾರೆ.
ಈ ವಿಚಾರ ಅಧಿಕಾರಿಗಳಿಗೆ ತಿಳಿದ ನಂತರ ಎಚ್ಚೆತ್ತ ಅಧಿಕಾರಿಗಳು ಹಣ ಹಾಗೂ ಪೀಠೋಪಕರಣಗಳನ್ನು ವಾಪಸ್ ಪಡೆದುಕೊಂಡಿದ್ದಾರೆ. ಸರ್ಕಾರ ಯೋಜನೆಗಳನ್ನು ರೂಪಿಸಿದರೆ ಸಾಲದು ಅದನ್ನು ಸರಿಯಾಗಿ ನಿರ್ವಹಿಸಲೂ ಮುಂದಾಗಬೇಕು. ಇಲ್ಲವಾದರೆ ಇಂತಹ ಅನಾಹುತಗಳನ್ನು ಎದುರಿಸಬೇಕಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.
ಇನ್ನೂ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರೆಂಟಿಗಳ ಮೇಲೆ ಗ್ಯಾರೆಂಟಿ ಜಾರಿ ಮಾಡಿದೆ. ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ನೇರವಾಗಿ ಪ್ರಯೋಜನ ಸಿಗುತ್ತಿದೆ. ಕೇವಲ ಯೋಜನೆ ಮಾಡಿದರೆ ಸಾಲದು ಅದನ್ನು ನಿರ್ವಹಿಸುವ ಸಾಮರ್ಥ್ಯ ಕೂಡ ಸರಿಯಾಗಿ ಇರಬೇಕು. ಸಾರ್ವಜನಿಕವಾಗಿ ಸಾಕಷ್ಟು ಪ್ರಚಾರ ಹೊಂದಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಇಂತಹ ಸಾಕಷ್ಟು, ಅವ್ಯವಸ್ಥೆಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಬಡವರಿಗೆ ಸಿಗಬೇಕಾದ ಯೋಜನೆ ಕಂಡವರ ಪಾಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

























