3:32 PM Wednesday 20 - August 2025

ವಿದ್ಯಾರ್ಥಿ ಹೋರಾಟಗಾರನ ತಂಗಿ ಇದೀಗ ನ್ಯಾಯಾಧೀಶೆ: ಫರಾ ಇದೀಗ ಐಕಾನ್!

30/11/2024

2020ರ ದೆಹಲಿ ಗಲಭೆಗೆ ಸಂಚು ನಡೆಸಿದ್ದಾರೆ ಎಂದು ಆರೋಪಿಸಿ ಜೈಲಿಗೆ ತಳ್ಳಲಾದ ವಿದ್ಯಾರ್ಥಿ ಹೋರಾಟಗಾರ ಶರ್ಜಿಲ್ ಇಮಾಮ್ ನ ಸಹೋದರಿ ಪರಾ ನಿಶಾತ್ ಈಗ ಬಿಹಾರದ ನ್ಯಾಯಾಧೀಶೆಯಾಗಿ ಗಮನ ಸೆಳೆದಿದ್ದಾರೆ. ಬಿಹಾರದಲ್ಲಿ ನಡೆದ ಜ್ಯುಡಿಶಿಯಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಫರಾ ನಿಶಾದ್ ಜಡ್ಜ್ ಆಗಿ ಕಾರ್ಯ ನಿರ್ವಹಿಸುವುದಕ್ಕೆ ತಯಾರಿಯಲ್ಲಿದ್ದಾರೆ. ಇವರು ಪರೀಕ್ಷೆಯಲ್ಲಿ 139ನೇ ರಾಂಕ್ ಪಡೆದಿದ್ದರು.

ಶರ್ಜೀಲ್ ಇಮಾಮ್ ನ ಇನ್ನೋರ್ವ ಸಹೋದರ ಮತ್ತು ಜೆಡಿಎಸ್ ನಾಯಕನೂ ಆಗಿರುವ ಮುಝಮ್ಮಿಲ್ ಇಮಾಮ್ ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ.

ಇದುವೇ ಜೀವನದ ತತ್ವ ಶಾಸ್ತ್ರವಾಗಿದೆ. ಒಂದು ಕಡೆ ದಬ್ಬಾಳಿಕೆಯ ವಿರುದ್ಧ ಮಾತಾಡಿದ್ದಕ್ಕಾಗಿ ಸಹೋದರ ಜೈಲಲಿದ್ದಾನೆ, ಇನ್ನೊಂದು ಕಡೆ ದಬ್ಬಾಳಿಕೆಯ ವಿರುದ್ಧ ನ್ಯಾಯದ ಧ್ವನಿಯಾಗಲುಫರಾ ನ್ಯಾಯಾಧೀಶರ ಕುರ್ಚಿಗೇರಿದ್ದಾಳೆ. ಸಹೋದರಿ ಫರ ನಿಷಾತ್ ಅವರು 32ನೇ ಬಿಹಾರ್ ಜುಡಿಶಿಯಲ್ ಸರ್ವಿಸ್ ಪರೀಕ್ಷೆ ತೇರ್ಗಡೆಯಾಗಿ ಇದೀಗ ನ್ಯಾಯಾಧೀಶೆಯಾಗುವ ಹಂತದಲ್ಲಿದ್ದಾಳೆ.

ಆಕೆಯ ತೀರ್ಪಿನಲ್ಲಿ ಒಬ್ಬರೇ ಒಬ್ಬರು ನಿರಪರಾಧಿಗೆ ಶಿಕ್ಷೆಯಾಗದಿರಲಿ. ಅಲ್ಲಾಹು ನಿನಗೆ ಧೈರ್ಯ ಮತ್ತು ಶಕ್ತಿಯನ್ನು ನೀಡಲಿ ಎಂದವರು ತಮ್ಮ ಸೋಶಿಯಲ್ ಮೀಡಿಯಾದ ಪೋಸ್ಟ್ ನಲ್ಲಿ ಪ್ರಾರ್ಥಿಸಿದ್ದಾರೆ.
ರಾಯ್ ಪೂರ್ ನಹಿದಾಯತುಲ್ಲ ನ್ಯಾಷನಲ್ ಯೂನಿವರ್ಸಿಟಿಯಿಂದ ಫರ ನಿಶಾತ್ ಎಲ್ ಎಲ್ ಬಿ ಪದವಿ ಪಡೆದಿದ್ದಾರೆ. 2018 ರಿಂದ 21 ರವರೆಗೆ ಸುಪ್ರೀಂ ಕೋರ್ಟ್ ನಲ್ಲಿ ಲಾ ಕ್ಲಾರ್ಕ್ ಕಮ್ ರಿಸರ್ಚ್ ಅಸಿಸ್ಟೆಂಟ್ ಆಗಿ ಉದ್ಯೋಗ ಮಾಡಿದ್ದಾರೆ. ಈ ಸಮಯದಲ್ಲಿ ಬಿಹಾರ ಜ್ಯುಡಿಷಿಯಲ್ ಸರ್ವಿಸ್ ಪರೀಕ್ಷೆಗೆ ಈಕೆ ತಯಾರಿ ನಡೆಸಿದ್ದರು.

2020 ಜನವರಿ 28ರಂದು ಬಂಧನಕ್ಕೆ ಒಳಗಾದ ಬಳಿಕ ಇಂದಿನವರೆಗೆ ಶರ್ಜಿಲ್ ಇಮಾಮ್ ಜೈಲಿನಲ್ಲಿದ್ದಾರೆ. ದೆಹಲಿ ಗಲಭೆಗೆ ಸಂಬಂಧಿಸಿ ಮೊದಲು ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದ ದೆಹಲಿ ಪೊಲೀಸರು ಆ ಬಳಿಕ ಯುಎಪಿಎ ದಾಖಲಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version