10:12 AM Saturday 23 - August 2025

ಅವಘಡ: ಉತ್ತರ ಪ್ರದೇಶದಲ್ಲಿ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಸಾವು

09/12/2023

ಉತ್ತರ ಪ್ರದೇಶದ ಮೌ ಎಂಬಲ್ಲಿ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 23 ಜನರು ಗಾಯಗೊಂಡಿದ್ದಾರೆ.

ಮೌವಿನ ಘೋಸಿಯಲ್ಲಿ ನಡೆದ ವಿವಾಹ ಆಚರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗೋಡೆಯ ಎದುರು ಬದಿಯಲ್ಲಿ ಮರಳಿನ ದಿಬ್ಬವನ್ನು ಇರಿಸಲಾಗಿತ್ತು. ಇದರಿಂದಾಗಿ ಗೋಡೆ ಕುಸಿದಿದೆ. ಜನರು ಒಳಗೆ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೌ ಜಿಲ್ಲಾಧಿಕಾರಿ ಅರುಣ್ ಕುಮಾರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಪೊಲೀಸ್ ಮತ್ತು ರಕ್ಷಣಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದರು.

ಈ ಗ್ರಾಮದ ಕೆಲವು ಮಹಿಳೆಯರು ಹಳೆಯ ಗೋಡೆಯ ಸಮೀಪ ಮದುವೆ ಆಚರಣೆಯಲ್ಲಿ ಭಾಗವಹಿಸುತ್ತಿದ್ದಾಗ ಗೋಡೆ ಕುಸಿದು ಅವರ ಮೇಲೆ ಬಿದ್ದಿದೆ ಎಂದು ಕಲೆಕ್ಟರ್ ತಿಳಿಸಿದ್ದಾರೆ.
ಅವಶೇಷಗಳನ್ನು ತೆರವುಗೊಳಿಸಲು ಎರ್ತ್ಮೋವರ್ ಅನ್ನು ನಿಯೋಜಿಸಲಾಗಿದ್ದು, ಒಳಗೆ ಸಿಕ್ಕಿಬಿದ್ದ ಎಲ್ಲ ಜನರನ್ನು ರಕ್ಷಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version