11:40 PM Saturday 23 - August 2025

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಮತ್ತೆ ಐವರ ಬಂಧನ

22/06/2024

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಇನ್ನೂ ಐವರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಜಾರ್ಖಂಡ್‌ನ ದಿಯೋಘಾರ್ ಹಾಗೂ ರಾಂಚಿಯಲ್ಲಿ ಐವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸಾಕ್ಷ್ಯಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಐವರನ್ನು ಹೆಚ್ಚಿನ ವಿಚಾರಣೆಗಾಗಿ ಪಾಟ್ನಾಗೆ ಕರೆತರಲಾಗಿದೆ. ಬಂಧಿತರಲ್ಲಿ ಇಬ್ಬರಾದ ಅವದೇಶ್, ಅಭಿಷೇಕ್ ಅಪ್ಪ ಮಕ್ಕಳಾಗಿದ್ದು, ಮಗ ಅಭಿಷೇಕ್ ನೀಟ್ ಪರೀಕ್ಷೆ ಬರೆದಿದ್ದ. ಇಬ್ಬರು ರಾಂಚಿ ನಿವಾಸಿಗಳಾಗಿದ್ದಾರೆ.
ಅಭಿಷೇಕ್ ಪ್ರಮುಖ ಆರೋಪಿ ಸಿಖಂದರ್ ಯಾದವೆಂದು ಅವನೊಂದಿಗೆ ಸಂಪರ್ಕ ಹೊಂದಿದ್ದು, ಈತನೊಂದಿಗೆ ಜಾರ್ಖಂಡ್‌ನ ಉದ್ಯಮ ಯೋಜನೆಯೊಂದರಲ್ಲಿ ಪಾಲು ಹೊಂದಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಬಿಹಾರ ಪೊಲೀಸರು ಬಂಧಿಸಿರುವ 13 ಮಂದಿಯಲ್ಲಿ ನಾಲ್ವರು ನೀಟ್- ಯುಜಿ ಅಭ್ಯರ್ಥಿಗಳು ಹಾಗೂ ಅವರ ಕುಟುಂಬ ಸದಸ್ಯರಾಗಿದ್ದಾರೆ. ಪರೀಕ್ಷೆಗೂ ಮೊದಲು ಈ ಆರೋಪಿಗಳು ಅಂದಾಜು 35 ಜನ ವಿದ್ಯಾರ್ಥಿಗಳೊಂದಿಗೆ ಪ್ರಶ್ನೆಗಳನ್ನು ಹಂಚಿಕೊಂಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ

Exit mobile version